ರಾಯಚೂರು ಜಿ.ಸುರೇಶ ಪ್ರತಿಷ್ಠಾನದಿಂದ ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜ.10 ರಂದು ಸಾಹಿತಿ ವೀರಹನುಮಾನ ರಚಿಸಿದ ಆತ್ಮಬಂಧು ಎರಡು ಜೀವ, ಒಂದು ಕಥಾನಕ ಎಂಬ ಕೃತಿ ಲೋಕಾರ್ಪಣೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆಂದು ಪ್ರತಿಷ್ಠಾನ ಸದಸ್ಯ ಈರಣ್ಣ ಬೆಂಗಾಲಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿ.ಸುರೇಶ ಅಗಲಿ ಒಂದು ವರ್ಷ ಕಳೆದಿದೆ. ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಉದ್ಘಾಟಿಸಲಿದ್ದಾರೆ.
ಕೃತಿಯನ್ನು ಮಾಜಿ ಸಚಿವ ಕುಮಾರ ಬಂಗಾರಪ್ಪ ಬಿಡುಗಡೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ತಾರಾನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಾರಸಮಲ್ ಸುಖಾಣಿ ವಹಿಸಲಿದ್ದಾರೆ. ಕೃತಿಯ ಕುರಿತು ಸಾಹಿತಿ ಮಹಾಂತೇಶ ಮಸ್ಕಿ ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬ್ರಹ್ಮ ಶ್ರೀಪವಮಾನಾಚಾರ್ಯ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಮಣ್ಣ ಹವಳೆ, ಕೃತಿಕಾರ ವೀರಹನುಮಾನ ಭಾಗವಹಿ ಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪ್ರತಿಷ್ಟಾನದ ಸದಸ್ಯರಾದ ಮಲ್ಕಪ್ಪ ಪಾಟೀಲ್, ಬಸವರಾಜ, ರಾಜೇಶ ಮಡಿವಾಳ, ಅಜಯ,ಮುನಿಸ್ವಾಮಿ ಇದ್ದರು.