ರಾಯಚೂರಿನ ಡ್ಯಾಡಿ ಕಾಲೋನಿಯ ಈಶ್ವರ ದೇವಸ್ಥಾನದಲ್ಲಿ ನಾಗದೇವತೆಗೆ ನಾಗರ ಚೌತಿ ನಿಮಿತ್ತ ಮಹಿಳೆಯರು ಭಾನುವಾರ ಹಾಲೆರೆದರು. 
ರಾಯಚೂರು

ಸಡಗರದಿಂದ ನಾಗರ ಚೌತಿ ಆಚರಣೆ

ರಾಚಯ್ಯ ಸ್ವಾಮಿ

ಶ್ರಾವಣ ಮಾಸದ ವಿಶೇಷವಾಗಿ ಆಚರಣೆ ಮಾಡುವ ನಾಗರ ಚೌತಿ ಹಬ್ಬವನ್ನು ನಗರ ಸೇರಿದಂತೆ ಜಿಲ್ಲಾಧ್ಯಂತ ಭಾನುವಾರ ಸಡಗರ ಸಂಭ್ರಮದಿಂದ ಆಚರಿಸಿದರು.

ಮನೆಮಂದಿಯಲ್ಲ ಸೇರಿ ಮಳೆ, ಬೆಳೆ, ಜೀವನ ಸಮೃದ್ಧಗೊಳಿಸುವಂತೆ ಹತ್ತಿದ ದೇವಸ್ಥಾನಗಳಲ್ಲಿನ ನಾಗದೇವರಿಗೆ ಪೂಜೆ ಸಲ್ಲಿಸಿದರು. ಬೆಳಗ್ಗೆಯಿಂದಲೇ ನಗರದ ವಿವಿಧ ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸಿರುವ ನಾಗದೇವತೆಗಳ ಮೂತಿರ್ಗಳು, ಹಾವಿನ ಹುತ್ತಗಳು ಹಾಗೂ ಹಬ್ಬದ ನಿಮಿತ್ತ ಮನೆಯಲ್ಲಿಟ್ಟಿದ್ದ ಮಣ್ಣಿನ ನಾಗದೇವರಿಗೆ ಮನೆ ಮಂದಿ ಬೆಲ್ಲದ ಹಾಲರೆದು, ಶ್ರದ್ದಾ ಭಕ್ತಿಯಿಂದ ಪೂಜೆ ಸಲ್ಲಿಸಿದರು.

ನಂತರ ಮನೆಯಲ್ಲಿ ತಯಾರಿಸಿದ್ದ ಶೇಂಗಾ, ಪುಠಾಣಿ, ರವೆ, ದಾನಿ, ಅಳ್ಳಿಟ್ಟು, ಎಳ್ಳು ಸೇರಿ ಇನ್ನಿತರ ಉಂಡಿಗಳನ್ನು ನೈವೇದ್ಯವಾಗಿ ಅಪಿರ್ಸಿ, ಬಳಿಕ ಮನೆಯ ಮಂದಿಯೆಲ್ಲ ಒಟ್ಟಿಗೆ ಕುಳಿತು ಭೋಜನ ಸವಿದರು.