ಪ್ರಾಣೇಶ್ 
ರಾಯಚೂರು

ಅನೈತಿಕ ಸಂಬಂಧ ಯುವಕನ ಕೊಲೆ

ರಾಯಚೂರು ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಯುವಕನ ಬರ್ಬರ ಕೊಲೆ ಮಾಡಿದ ಘಟನೆ ತಾಲೂಕಿನ ಬುಳ್ಳಾಪುರ ಗ್ರಾಮದಲ್ಲಿ ಸೋಮವಾರ ನಡೆದಿದೆ.
ತಾಲೂಕಿನ ಬುಳ್ಳಾಪುರ ಗ್ರಾಮದ ಪ್ರಾಣೇಶ್ (23) ಕೊಲೆಯಾದ ವ್ಯಕ್ತಿಯಾಗಿದ್ದು, ದಿನ್ನಿ ಗ್ರಾಮದ ಪ್ರಸಾಸ್, ಮಲ್ಲೇಶ್ , ಮಲ್ಲಿಕಾರ್ಜುನ್ , ಅಮರೇಶ್ ಕೊಲೆ ಮಾಡಿದ ಆರೋಪಿಗಳೆಂದು ಹೇಳಲಾಗುತ್ತಿದೆ.
ಗ್ರಾಮದ ಪ್ರಸಾದ್‌ನ ಹೆಂಡತಿ ಮತ್ತು ಪ್ರಾಣೇಶ್ ನಡುವೆ ಅನೈತಿಕ ಸಂಬಂಧ ಇತ್ತು ಎನ್ನಲಾಗುತ್ತಿದೆ. ಬುಳ್ಳಾಪುರದಲ್ಲಿ ಜಾಗದ ವಿಷಯವಾಗಿ ನ್ಯಾಯ ಪಂಚಾಯಿತಿ ನಡೆಯುತ್ತಿದ್ದ ವೇಳೆ ತಾಯಿ ಎದುರಲ್ಲೇ ಕೊಡಲಿಯಿಂದ ಹೊಡೆದು ಕೊಲೆ ಮಾಡಲಾಗಿದೆ. ಕಳೆದ ಮೂರು ತಿಂಗಳಿನಿಂದ ಪ್ರಾಣೇಶ್‌ಗಾಗಿ ಹುಡುಕಾಟ ನಡೆಸುತ್ತಿದ್ದರು.
ಪ್ರಾಣೇಶ್ ಇರುವುದನ್ನು ಖಚಿತಪಡಿಸಿಕೊಂಡು ಹಿಂದಿನಿಂದ ಬಂದ ಪ್ರಸಾದ್ ತಲೆಗೆ ಕೊಡಲಿಯಿಂದ ಹೊಡೆದಿದ್ದಾನೆ. ಗಂಭೀರ ಗಾಯಗೊಂಡ ಪ್ರಾಣೇಶ್‌ನನ್ನು ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಆರೋಪಿಗಳು ತಲೆ ಮರೆಸಿಕೊಂಡಿದ್ದು, ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.