ವಿಶ್ವ ಪರಂಪರೆ ಸಪ್ತಾಹ ನಿಮಿತ್ತ ಮುದಗಲ್‌ನ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಲಾಯಿತು. ಪ್ರಮುಖರಾದ ಶರಣಪ್ಪ ಆನೆಹೊಸೂರು, ಅಶೋಕಗೌಡ ಪಾಟೀಲ್, ಸಿದ್ದರಾಮ ಪಾಟೀಲ್, ಪ್ರವೀಣ ಭೋಗಾರ ಹಾಗೂ ಇತರರಿದ್ದರು.
- ಸಾಹಿತಿ ಶರಣಪ್ಪ ಆನೆಹೊಸೂರು ಹೇಳಿಕೆ
- ವಿಶ್ವ ಪರಂಪರೆ ಸಪ್ತಾಹ ಕಾರ್ಯಕ್ರಮ
ಮುದಗಲ್: ಮುದಗಲ್ ಪ್ರಾಚೀನ ವ್ಯಾಪಾರ ಕೇಂದ್ರವಾಗಿತ್ತು ಎಂದು ಸಾಹಿತಿ ಶರಣಪ್ಪ ಆನೆಹೊಸೂರು ಹೇಳಿದರು.
ಪಟ್ಟಣದ ಕಿಲ್ಲಾ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಪರಂಪರೆ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುದಗಲ್ ಕೋಟೆಗಾಗಿ ಬಹುಮನಿ ಷಾ, ವಿಜಯಪುರ ಆದಿಲ್ ಶಾಹಿ, ವಿಜಯ ನಗರ ಅರಸರ ನಡುವೆ ಅನೇಕ ಯುದ್ಧಗಳು ನಡೆದಿವೆ. ಈ ಅರಸು ಮನೆತನಗಳಿಗೆ ಮುದಗಲ್ ಪ್ರತಿಷ್ಠೆ ಕಣವಾಗಿ ಮಾರ್ಪಟ್ಟಿತ್ತು. ಮುದಗಲ್ ಕೋಟೆಗಾಗಿಯೇ ತಾಳಿಕೋಟೆ ಯುದ್ಧ ನಡೆದಿದೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಅಶೋಕಗೌಡ ಪಾಟೀಲ್, ಪ್ರಾಚ್ಯವಸ್ತು ಇಲಾಖೆ ಅಧಿಕಾರಿ ಶಿವಪ್ರಕಾಶ, ಉಪನ್ಯಾಸಕ ಚನ್ನಾರಡ್ಡಿ, ಗೃಹ ರಕ್ಷಕ ದಳದ ಅಧಿಕಾರಿ ತಿಮ್ಮನಗೌಡ ಆನೆಹೊಸೂರು, ಎಂ.ಡಿ.ಚಿತ್ತರಿಗಿ ಮಾತನಾಡಿದರು.
ಪ್ರಾಚ್ಯವಸ್ತು ಇಲಾಖೆ ಅಧಿಕಾರಿ ಶಿವಪ್ರಕಾಶ, ಪುರಸಭೆ ಮುಖ್ಯಾಧಿಕಾರಿ ಪ್ರವೀಣ ಭೋಗಾರ, ಪ್ರಾಚಾರ್ಯ ಸಿದ್ದರಾಮ ಪಾಟೀಲ್, ದೇವಣ್ಣ ಕೋಡಿಹಾಳ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೇರಿ ವಿವಿಧ ಕಾಲೇಜುಗಳು ವಿದ್ಯಾರ್ಥಿಗಳು ಭಾಗವಹಿಸಿದ್ದರು.