ಮಧ್ವನವಮಿ ನಿಮಿತ್ತ ಮುದಗಲ್‌ನ ಕಿಲ್ಲಾದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠದ ಪ್ರಾಂಗಣದಲ್ಲಿ ಮಧ್ವಾಚಾರ್ಯರಥೋತ್ಸವ ಜರುಗಿತು. ಅರ್ಚಕರಾದ ಮಧ್ವಾಚಾರ್ಯರು, ಸೇತುರಾಮಾಚಾರ್ಯರು ಹಾಗೂ ಭಕ್ತರು ಭಾಗವಹಿಸಿದ್ದರು. 
ರಾಯಚೂರು

ಮುದಗಲ್‌ನಲ್ಲಿ ಮಧ್ವನವಮಿ ಆಚರಣೆ

ನರೇಶ್ ಕುಮಾರ್
ಮುದಗಲ್: ಪಟ್ಟಣದ ಕಿಲ್ಲಾದಲ್ಲಿರುವ ತೃತೀಯ ಮಂತ್ರಾಲಯವೆಂದೇ ಕರೆಯಲ್ಪಡುವ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಂಗಳವಾರ ಮಧ್ವನವಮಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. 
ಮಧ್ವನವಮಿ ನಿಮಿತ್ತ ರಾಯರ ಬೃಂದಾವನಕ್ಕೆ ಬಗೆಬಗೆಯ ಹೂಗಳಿಂದ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಶ್ರೀಮಠದ ಅರ್ಚಕ ಮಧ್ವಾಚಾರ್ಯ ಹಾಗೂ ಸೇತುರಾಮಾಚಾರ್ಯರ ನೇತೃತ್ವದಲ್ಲಿ ಹೋಮ, ಹವನ ನೆರವೇರಿತು. 
ಬಳಿಕ ಶ್ರೀ ಮಠದ ಆವರಣದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ಸಡಗರದಿಂದ ಮಧ್ವಾಚಾರ್ಯರ ರಥೋತ್ಸವ ಜರುಗಿತು. ಡಾ.ಗುರುರಾಜ ದೇಶಪಾಂಡೆ, ವೆಂಕಟೇಶ ಕುಲಕರ್ಣಿ, ಶ್ರೀಧರ ಗುಡಿ, ಗುರುರಾಜ ದೇಶಪಾಂಡೆ, ವಾಸು ಸುರಪುರ, ಶ್ರೀನಿವಾಸ ಕಿಲ್ಲಾ ಇತರರಿದ್ದರು.