ರಾಜ್ಯ ಎಸ್ಸಿ,ಎಸ್ಟಿ ಮಿಸಲಾತಿ ಪ್ರಮಾಣ ಹೆಚ್ಚಳ ಜಾರಿಗೆ ಭಾರತ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲೆಯ ಸಂಸದರು ಮುತುವರ್ಜಿ ವಹಿಸುವಂತೆ ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷದಿಂದ ಜಿಲ್ಲಾ ಸಮಿತಿಯಿಂದ ಸೋಮವಾರ ರಾಯಚೂರಿನ ಟಿಪ್ಪು ಸುಲ್ತಾನ ಉದ್ಯಾನವನದಲ್ಲಿ ಪ್ರತಿಭಟನೆ ಮಾಡಿದರು. ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ಜಿ.ವೀರೇಶ, ಪ್ರಮುಖರಾದ ಹೆಚ್.ಪದ್ಮಾ, ಡಿ.ಎಸ್.ಶರಣಬಸವ, ನರಸಣ್ಣ ನಾಯಕ, ಗಿರಿಯಪ್ಪ, ಶಬ್ಬಿರ ಜಾಲಹಳ್ಳಿ, ದೇವೇಂದ್ರಗೌಡ, ಗೋಕುರಮ್ಮ, ಗಂಗಮ್ಮ ಇದ್ದರು. 
ರಾಯಚೂರು

ಮೀಸಲಾತಿ ಹೆಚ್ಚಳಕ್ಕೆ ಸಂಸದರು ಮುತುವರ್ಜಿ ವಹಿಸಲಿ


ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲಾತಿ ಪ್ರಮಾಣ ಹೆಚ್ಚಿಸುವ ಕರ್ನಾಟಕದ ತೀರ್ಮಾನಕ್ಕೆ ಕೇಂದ್ರದ ಬಿಜೆಪಿ, ಎನ್‌ಡಿಎ ಸರ್ಕಾರ ಕೂಡಲೇ ಅನುಮೋಧನೆ ನೀಡಬೇಕು. ಇದನ್ನು ಸಂವಿಧಾನ ಶೆಡ್ಯೂಲ್ 9ರಲ್ಲಿ ಸೇರಿಸಿ, ಕೇಂದ್ರದಲ್ಲಿರುವಂತೆ ಶೇ.17 ಮತ್ತು ಶೇ.7ರ ಜಾರಿಗೆ ಅನುವು ಮಾಡಿಕೊಡಬೇಕು. ಇದಕ್ಕಾಗಿ ಸಂಸದರು ವಿಶೇಷ ಒತತ್ತಡವನ್ನು ಸರ್ಕಾರದ ಮೇಲೆ ಹೇರಬೇಕು ಎಂದರು.

ಇಂದಿನ ನಿರುದ್ಯೋಗ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಭಾರತ ಒಕ್ಕೂಟ ದ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಬೇಕು. ಮತ್ತು ಬ್ಯಾಕ್‌ಲಾಗ್ ಹುದ್ದೆಗಳನ್ನು ಯಾವುದೇ ಸಂದರ್ಭದಲ್ಲಿ ಸಾಮಾನ್ಯ ಗುಂಪಿಗೆ ವರ್ಗಾಯಿಸಬಾರದು. ಹಾಗೆಯೇ ಇಲಾಖೆಗಳಲ್ಲಿರುವ ಸುಮಾರು 3 ಲಕ್ಷ ಉದ್ಯೋಗಗಳನ್ನು ಭರ್ತಿ ಮಾಡಬೇಕು. ಉದ್ಯೋಗ ನೇಮಕಾರಿ ಮಾಡುವಾಗ ಒಳಮೀಸಲಾತಿಯ ಎಲ್ಲಾ ಪ್ರವರ್ಗಗಳಿಗೆ ನ್ಯಾಯಸಮ್ಮತವಾದ ರೀತಿಯಲ್ಲಿ ರೋಸ್ಟರ್ ಬಿಂದು ಅಳವಡಿಸಬೇಕು. ಇದಕ್ಕಾಗಿ ಕಾನೂನು ತಜ್ಞರು, ಚಳವಳಿ ಸಂಘಟನೆಗಳ ಪ್ರತಿನಿಧಿಗಳು, ಅಧಿಕಾರಿಗಳನ್ನೊಳಗೊಂಡ ಸಮಾಲೋಚನ ಸಭೆಗಳನ್ನು ನಡೆಸಿ, ತೀರ್ಮಾನ ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ಜಿ.ವೀರೇಶ, ಪ್ರಮುಖರಾದ ಹೆಚ್.ಪದ್ಮಾ, ಡಿ.ಎಸ್.ಶರಣಬಸವ, ನರಸಣ್ಣ ನಾಯಕ, ಗಿರಿಯಪ್ಪ, ಶಬ್ಬಿರ ಜಾಲಹಳ್ಳಿ, ದೇವೇಂದ್ರಗೌಡ, ಗೋಕುರಮ್ಮ, ಗಂಗಮ್ಮ ಸೇರಿ ಅನೇಕರು ಇದ್ದರು.