ರಾಯಚೂರು ತಳವಾರರಿಗೆ ಎಸ್ಟಿ ಪ್ರಮಾಣ ಪತ್ರ ನೀಡುವಂತೆ ಹೇಳಿಕೆ ನೀಡಿದ ಎಂಎಲ್ಸಿ ಎನ್.ರವಿಕುಮಾರ ಒತ್ತಾಯಿಸಿದ್ದು ಯಾವ ಜಾತಿ ತಳವಾರರಿಗೆ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ಹೇಳದೇ ಜನರನ್ನು ದಾರಿತಪ್ಪಿಸುತ್ತಿದ್ದಾರೆಂದು ಹೈದ್ರಾಬಾದ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ವಿಭಾಗೀಯ ಕಾರ್ಯದರ್ಶಿ ಎನ್.ರಘುವೀರ ನಾಯಕ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1991-92 ಸಾಲಿನಲ್ಲಿ ಪರಿಶಿಷ್ಟ ಪಂಗಡ ಉಪಜಾತಿಗಳಾದ ತಳವಾರ, ಪರಿವಾರ ಜಾತಿಗಳು ಪಟ್ಟಿಯಿಂದ ಕೈ ಬಿಟ್ಟು ಹೋಗಿದ್ದರಿಂದ ಸೇರ್ಪಡೆ ಮಾಡಿದ್ದಾರೆ. ಹೊರತು ಬೇರೆ ಜಾತಿಗಳಲ್ಲಿರುವ ತಳವಾರ, ಪರಿವಾರ ಜಾತಿ ಜನರನ್ನು ಸೇರ್ಪಡೆ ಮಾಡಿಲ್ಲ. ಸರ್ಕಾರ ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ಪರಿಶಿಷ್ಟ ಪಂಗಡ ಉಪಜಾತಿಗಳನ್ನು ಉಲ್ಲೇಖಿಸಿ ನಾಯಕ ಸಮೂದಾಯ ಉಪಜಾತಿಗಳನ್ನು ಕ್ರಮಸಂಖ್ಯೆ
38 ರಲ್ಲಿ ಸೇರ್ಪಡೆ ಮಾಡಲಾಗಿದೆ. ತಪ್ಪಾಗಿ ಅರ್ಥೈಸಿಕೊಂಡು ಹೇಳಿಕೆ ನೀಡಿರುವದರಿಂದ ಸಮಾಜ ಗಳ ಮಧ್ಯೆ ಸಂಘರ್ಷಕ್ಕೆ ಕಾರಣವಾಗಿದೆ. ಇಂತಹ ಗೊಂದಲ ಉಂಟು ಮಾಡುವ ಹೇಳಿಕೆ ನೀಡುವದನ್ನು ಮುಂದುವರೆಸಿದರೆ ರಾಜ್ಯದಾಧ್ಯಂತ ಹೋರಾಟ ನಡೆಸುವದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ರಾಮು ನಾಯಕ, ರಮೇಶ ನಾಯಕ, ಮಹೇಶ ನಾಯಕ ಇದ್ದರು.