ಪಾಮನಕಲ್ಲೂರಿನಲ್ಲಿ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಶ್ರೀಶೈಲಪ್ಪ, ಬಸವರಾಜಪ್ಪ ಕಡಬೂರ, ನಾಗಲಿಂಗಪ್ಪ, ಕಂಡೋಜಿರಾವ್, ಮುದುಕಪ್ಪ ಸಜ್ಜನ, ಬಸನಗೌಡ ಹರ‌್ವಪೂರ, ಅಮರೇಶ ಕಲ್ಲೂರು ಇತರರಿದ್ದರು. 
ರಾಯಚೂರು

5ಏ ನಾಲೆ ಜಾರಿಗೆ ಶಾಸಕರ ಶ್ರಮ

ಪ್ರವೀಣ ಉದುಸಾ ದಲಬಂಜನ್
ಕವಿತಾಳ: ಮಸ್ಕಿ ಕ್ಷೇತ್ರದ ರೈತರ ಬಹುದಿನದ ಬೇಡಿಕೆಯಾಗಿದ್ದ 5ಏ ನಾಲೆ ಯೋಜನೆಯು ಜಾರಿಯಾಗಿದ್ದು, ಹಲವು ಗ್ರಾಮದ ರೈತರಿಗೆ ಅನುಕೂಲವಾಗಲಿದೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ತಾಲೂಕಿನ ಪಾಮನಕಲ್ಲೂರಿನಲ್ಲಿ ರೈತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಪಾಮನಕಲ್ಲೂರು, ಅಮೀನಗಡ, ವಟಗಲ್, ಅಂಕುಶದೊಡ್ಡಿ ಗ್ರಾಮದ ರೈತರಿಗೆ ಅನುಕೂಲವಾಗಲಿದೆ. ಯೋಜನೆ ಜಾರಿಯಾಗಲು ಶಾಸಕ ಬಸನಗೌಡ ತುರ್ವಿಹಾಳ ಅವರ ಅವಿತರವಾದ ಪ್ರಯತ್ನವಿದೆ ಎಂದರು.
ಪ್ರಮುಖರಾದ ಶ್ರೀಶೈಲಪ್ಪ, ಬಸವರಾಜಪ್ಪ ಕಡಬೂರ, ನಾಗಲಿಂಗಪ್ಪ, ಕಂಡೋಜಿ ರಾವ್, ಮುದುಕಪ್ಪ ಸಜ್ಜನ, ಕಿರಿಲಿಂಗಪ್ಪ ಕವಿತಾಳ, ಅಮರೇಗೌಡ ಅಂಕುಶದೊಡ್ಡಿ, ಬಸನಗೌಡ ಹರ‌್ವಪೂರ, ನಿಂಗಪ್ಪ ಕುರಬರ, ಅಮರೇಶ ಕಲ್ಲೂರು, ಬಸವರಾಜ, ಶರಣಪ್ಪ ಕುಂಬಾರ ಚಿಲ್ಕರಾಗಿ , ಕಂಡೋಜಿರಾವ್ ಹರ‌್ವಪೂರ, ಹುಸೇನಪ್ಪ ಆನಂದಗಲ್ ಉಪಸ್ಥಿತರಿದ್ದರು.