ಮಸ್ಕಿ ತಾಲೂಕಿನ ಮಾರಲದಿನ್ನಿ ಗ್ರಾಮದಲ್ಲಿ ರೈತನಿಗೆ ಪರಿಹಾರದ ಚೆಕ್ ವಿತರಿಸಿದ ಶಾಸಕ ಆರ್.ಬಸನಗೌಡ ತುರ್ವಿಹಾಳ. ತಹಸೀಲ್ದಾರ್ ಮಂಜುನಾಥ ಭೋಗಾವತಿ, ಇಒ ಅಮರೇಶ ಯಾದವ್, ಮಹಿಬೂಬ್ ಸಾಬ್ ಮುದ್ದಾಪುರ ಇತರರಿದ್ದರು. 
ರಾಯಚೂರು

ಮಳೆ ಹಾನಿ ಪ್ರದೇಶಗಳಿಗೆ ಶಾಸಕ ಭೇಟಿ

ನರೇಶ್ ಕುಮಾರ್
ಮಸ್ಕಿ: ಇತ್ತೀಚೆಗೆ ಸುರಿದ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಶಾಸಕ ಆರ್.ಬಸನಗೌಡ ತುರ್ವಿಹಾಳ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು. 
ಮಾರಲದಿನ್ನಿ ಗ್ರಾಮ ಬಳಿ ಸಿಡಿಲು ಬಡಿದು ಮೂರು ಹಸುಗಳು ಸತ್ತ ಹಿನ್ನೆಲೆಯಲ್ಲಿ ಮಾಲೀಕನಿಗೆ 37 ಸಾವಿರ ರೂ. ಮೊತ್ತದ ಪರಿಹಾರ ಚೆಕ್ ವಿತರಿಸಿದರು. 
ಬಳಿಕ ಮುದಬಾಳ, ಅಂಕುಶದೊಡ್ಡಿ, ಸಂತೆಕೆಲ್ಲೂರು ಗ್ರಾಮಗಳ ಬಳಿ ಸಿಡಿಲಿಗೆ ಜಾನುವಾರುಗಳು ಬಲಿಯಾಗಿದ್ದರಿಂದ ಅವುಗಳ ಮಾಲೀಕರಿಗೆ ಪರಿಹಾರದ ಮೊತ್ತ ವಿತರಿಸಿದರು. 
ತಹಸೀಲ್ದಾರ್ ಮಂಜುನಾಥ ಭೋಗಾವತಿ, ತಾಪಂ ಇಒ ಅಮರೇಶ ಯಾದವ್, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಮಹಿಬೂಬ್ ಸಾಬ್ ಮುದ್ದಾಪುರ, ಮುಖಂಡರಾದ ವೆಂಕಟರೆಡ್ಡಿ ಹಾಲಾಪುರ, ಹನುಮೇಶ ಬಾಗೋಡಿ ಇತರರಿದ್ದರು.