ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಪ್ರಕ್ರಿಯೆಗೆ ಮಂಗಳವಾರ ರಾಯಚೂರಿನಲ್ಲಿ ಶಾಸಕ ಡಾ.ಶಿವರಾಜ ಪಾಟೀಲ್ ಅವರು ತಹಸೀಲ್ದಾರ್ ಸುರೇಶ ವರ್ಮಾರಿಗೆ ಮಾಹಿತಿ ನೀಡುವ ಮೂಲಕ ಚಾಲನೆ ನೀಡಿದರು. ತಹಸೀಲ್ದಾರ್ ಸುರೇಶ ವರ್ಮಾ, ಶ್ರೀನಿವಾಸರೆಡ್ಡಿ, ಭೀಮಣ್ಣ ಮಂಚಾಲ, ಡ್ಯಾಡಿ ವಿರೇಶ ಇದ್ದರು.
ರಾಯಚೂರು ನಗರವ ಸೇರಿದಂತೆ ಜಿಲ್ಲಾಧ್ಯಂತ ಪ್ರಾರಂಭವಾಗಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಪ್ರಕ್ರಿಯೆಗೆ ಮಂಗಳವಾರ ಶಾಸಕ ಡಾ.ಶಿವರಾಜ ಪಾಟೀಲ್ ಅವರು ತಹಸೀಲ್ದಾರ್ ಸುರೇಶ ವರ್ಮಾರಿಗೆ ಮಾಹಿತಿ ನೀಡುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿ, ಕೇಂದ್ರ ಸರ್ಕಾರ ನಡೆಸುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಗೆ ಮತದಾರರು ಮಾಹಿತಿಯನ್ನು ನೀಡುವ ಮೂಲಕ ಮತದಾನಹಕ್ಕು ಉಳಿಸಿಕೊಳ್ಳಬೇಕು. ಯಾರ ಹೆಸರನ್ನು ಮತದಾರ ಪಟ್ಟಿಯಿಂದ ತೆಗೆದು ಹಾಕುವದಿಲ್ಲ. ನಿಮ್ಮ ಮಾಹಿತಿಯನ್ನು ಅರ್ಜಿಯಲ್ಲಿ ಭರ್ತಿ ಮಾಡಿ ನೀಡಬೇಕು. ಆಮೂಲ ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಬೇಕು ಎಂದರು.
ತಹಸೀಲ್ದಾರ್ ಸುರೇಶ ವರ್ಮಾ ಮಾತನಾಡಿ, ಜೂ.30 ರಿಂದ ಜು.29ವರೆಗೆ ಎಸ್‌ಐಆರ್ ನಡೆಯಲಿದ್ದು ಮನೆ ಮನೆಗೆ ಬರುವ ಗಣತಿದಾರರಿಗೆ ಮಾಹಿತಿಯನ್ನು ನೀಡಿ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ದೃಢೀಕರಿಸಬೇಕು. ರಾಯಚೂರು ಮತ್ತು ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಸಹಕರಿಸಬೇಕೆಂದರು. ಎಲ್‌ಎಲ್‌ಎ, ಬಿಎಲ್‌ಓಗಳು ಸೇರಿದಂತೆ ಅಧಿಕಾರಿಗಳು ಶಾಸಕರೂ ಸೇರಿದಂತೆ ಕುಟುಂಬ ವರ್ಗದವರ ಮಾಹಿತಿಯನ್ನು ದಾಖಲಿಸಿದರು.
ಈ ಸಂದರ್ಭದಲ್ಲಿ ಶ್ರೀನಿವಾಸರೆಡ್ಡಿ, ಭೀಮಣ್ಣ ಮಂಚಾಲ, ಡ್ಯಾಡಿ ವಿರೇಶ ಸೇರಿ ಅನೇಕರು ಇದ್ದರು.