ಮಾನ್ವಿ ತಾಪಂ ಸಭಾಂಗಣದಲ್ಲಿ ಕರವೇ ತಾಲೂಕು ಘಟಕದಿಂದ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು. ಜಿಲ್ಲಾಧ್ಯಕ್ಷ ಅಶೋಕಕುಮಾರ ಜೈನ್, ತಾಲೂಕು ಅಧ್ಯಕ್ಷ ನರಸಿಂಹ, ಯಲ್ಲಪ್ಪ ಎನ್., ದೀಪಕ್ ಯಾದವ್ ಇತರರಿದ್ದರು.
ಮಾನ್ವಿ: ಜಿಲ್ಲೆಯಲ್ಲಿ ಏಮ್ಸ್ ಸ್ಥಾಪಿಸುವಂತೆ ವಿವಿಧ ಸಂಘ ಸಂಸ್ಥೆಗಳು 1300 ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ರಾಜ್ಯದ ಕೇಂದ್ರ ಸಚಿವರು ಮಂಜೂರು ಮಾಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಕರವೇ ಜಿಲ್ಲಾಧ್ಯಕ್ಷ ಅಶೋಕಕುಮಾರ ಜೈನ್ ಆರೋಪಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಭಾನುವಾರ ಕರವೇ (ಶಿವರಾಮೇಗೌಡ ಬಣ) ತಾಲೂಕು ಘಟಕ ಹಮ್ಮಿಕೊಂಡಿದ್ದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್ಯ ಸರ್ಕಾರ ಕೇಂದ್ರಕ್ಕೆ ನಾಲ್ಕು ಸಲ ಪತ್ರ ಬರೆದರೂ ಸ್ಪಂದಿಸಿಲ್ಲ ಎಂದರು.
ಉಪನ್ಯಾಸಕ ಡಾ.ಚನ್ನಬಸವ ಮಾತನಾಡಿ, ಕಾವೇರಿಯಿಂದ ಗೋದಾವರಿವರೆಗೂ ಹರಡಿರುವ ಭವ್ಯವಾದ ನಮ್ಮ ಕನ್ನಡ ನಾಡನ್ನು ಅನೇಕ ರಾಜ ಮಹಾರಾಜರು ಆಳ್ವಿಕೆ ಮಾಡಿದ್ದಾರೆ. ಇಂತಹ ಭವ್ಯ ಇತಿಹಾಸವನ್ನು ಮಕ್ಕಳಿಗೆ ತಿಳಿಸಬೇಕಾಗಿದೆ. ಕನ್ನಡ ನಮಗೆ ನಿತ್ಯ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು ಎಂದರು.
ಜೂ. ವಿಷ್ಣುವರ್ಧನ್ ಖ್ಯಾತಿಯ ವಿಷ್ಣು ನಾರಾಯಣಸ್ವಾಮಿ ವಿವಿಧ ಹಾಡುಗಳಿಗೆ ಹೆಜ್ಜೆ ಹಾಕಿ ರಂಜಿಸಿದರು. ಡಾ. ಬಸವರಾಜ ಸುಂಕೇಶ್ವರ, ಕರವೇ ರಾಜ್ಯ ಉಪಾಧ್ಯಕ್ಷ ಹರೀಶ್‌ಸಿಂಗ್, ಡಾ.ಪವನ್‌ಕುಮಾರ ದಾನಿ, ಡಾ.ದೇವರಾಜ ವರ್ಮ, ಕ್ರಾಂತಿ ಯಾದವ್, ತಾಪಂ ವ್ಯವಸ್ಥಾಪಕ ಬಸವರಾಜ, ಸುಭಾನ್‌ಬೇಗ್, ಚೇತನಸಿಂಗ್ ವಕೀಲರು ಇದ್ದರು.