ಸಿಂಧನೂರಿನಲ್ಲಿ ಕಾರ್ಮಿಕ ಇಲಾಖೆ ಕಚೇರಿ ಮುಂದೆ ಎಐಸಿಸಿಟಿಯು ತಾಲೂಕು ಸಮಿತಿ ಬುಧವಾರ ಪ್ರತಿಭಟನೆ ನಡೆಸಿತು. ರಾಜ್ಯ ಸಹ ಕಾರ್ಯದರ್ಶಿ ನಾಗರಾಜ ಪೂಜಾರ್, ಆರ್.ಎಚ್. ಕಲಮಂಗಿ, ಶರಣಪ್ಪ ಉದ್ಬಾಳ ಇತರರಿದ್ದರು. 
ರಾಯಚೂರು

ಕನಿಷ್ಠ ವೇತನ 42 ಸಾವಿರ ರೂ. ನಿಗದಿಪಡಿಸಿ

ಪ್ರಮುಖ ಮುಖ್ಯಾಂಶಗಳು

  • ಸಿಂಧನೂರಿನಲ್ಲಿ ಎಐಸಿಸಿಟಿಯು ತಾಲೂಕು ಸಮಿತಿ ಪ್ರತಿಭಟನೆ
ಸಿಂಧನೂರು: ಕಾರ್ಮಿಕರ ಕನಿಷ್ಠ ವೇತನ ಪರಿಷ್ಕರಿಸಿ ಮಾಸಿಕ 42 ಸಾವಿರ ರೂ. ನಿಗದಿ ಮಾಡಬೇಕೆಂದು ಒತ್ತಾಯಿಸಿ ಎಐಸಿಸಿಟಿಯು ತಾಲೂಕು ಸಮಿತಿ ಬುಧವಾರ ಕಾರ್ಮಿಕ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು. 
ರಾಜ್ಯದಲ್ಲಿ ಹಲವು ವರ್ಷಗಳಿಂದ ಕನಿಷ್ಠ ವೇತನ ಪರಿಷ್ಕರಣೆ ಮಾಡದ್ದರಿಂದ ಕಾರ್ಮಿಕರು ಜೀವನ ಸಾಗಿಸುವುದು ಕಷ್ಟವಾಗಿದೆ. ಅಗತ್ಯ ವಸ್ತುಗಳ ದರ ಹೆಚ್ಚಳದ ನಡುವೆ ಕಾರ್ಮಿಕರಿಗೆ ದೊರೆಯುತ್ತಿರುವ ಸಂಬಳ ಸಾಲುತ್ತಿಲ್ಲ. 
ಕನಿಷ್ಠ ವೇತನವು ಕಾರ್ಮಿಕರ ಮೂಲಭೂತ ಹಕ್ಕು. ಅದನ್ನು ನಿರಾಕರಿಸುವುದು ಕಾನೂನು ಉಲ್ಲಂಘನೆ ಮಾಡಿದಂತೆ ಎಂದು ಎಚ್ಚರಿಸಿದರು. 2017ರಿಂದ ಕನಿಷ್ಠ ವೇತನ ಸಮರ್ಪಕವಾಗಿ ಪರಿಷ್ಕರಿಸಿಲ್ಲ. ಸರ್ಕಾರ ಈಗಲೇ ಕನಿಷ್ಠ ವೇತನವನ್ನು ಕನಿಷ್ಠ 42 ಸಾವಿರ ರೂ.ಗೆ ಹೆಚ್ಚಿಸಬೇಕು. ಎಲ್ಲ ವಲಯಗಳ ಕಾರ್ಮಿಕರಿಗೆ ಸಮಾನವಾಗಿ ಜಾರಿಗೊಳಿಸಬೇಕು. 
ಮಹಿಳಾ ಕಾರ್ಮಿಕರು ಹಾಗೂ ಅಸಂಘಟಿತ ಕ್ಷೇತ್ರದ ಕಾರ್ಮಿಕರನ್ನು ಕಡಿಮೆ ಸಂಬಳಕ್ಕೆ ದುಡಿಸಿಕೊಳ್ಳುವ ಮೂಲಕ ಅನ್ಯಾಯ ಮಾಡಲಾಗುತ್ತಿದೆ. ಕಾನೂನು ಪ್ರಕಾರ ನಿಗದಿಪಡಿಸಿದ ಕನಿಷ್ಠ ವೇತನ ನೀಡದ ಮಾಲೀಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇದೇ ವೇಳೆ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಎಐಸಿಸಿಟಿಯು ರಾಜ್ಯ ಸಹ ಕಾರ್ಯದರ್ಶಿ ನಾಗರಾಜ ಪೂಜಾರ್, ಆರ್.ಎಚ್. ಕಲಮಂಗಿ, ಶರಣಪ್ಪ ಉದ್ಬಾಳ, ವೀರೇಶ ಜವಳಗೇರಾ, ಲಿಂಗಪ್ಪ ಬೇರಿಗಿ, ಮೌನೇಶ ಕವಿತಾಳ, ಶರಣಪ್ಪ, ರಾಮಣ್ಣ, ನಿರುಪಾದಪ್ಪ, ಹುಲ್ಲೇಶಪ್ಪ, ಶಿವನಗೌಡ, ನಾಗರಾಜ ನಾಯಕ್, ಅಮರೇಶ, ಹುಸೇನಪ್ಪ, ದಾನಪ್ಪ ಇತರರಿದ್ದರು.