mallanna 
ರಾಯಚೂರು

ಜು.19 ರಂದು ಸುಮಧುರ ಸಂಗಿತ

ರಾಚಯ್ಯ ಸ್ವಾಮಿ
ರಾಯಚೂರು ಎಸ್‌ಎಸ್‌ಎಚ್ ಸಾಂಸ್ಕೃತಿಕ ಕಲಾ ಪ್ರಕಾಶನ ಸಂಘದಿಂದ ಜು.19 ರಂದು ಸಣಜೆ 06 ಗಂಟೆಗೆ ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ವಿವಿಧ ಕಲಾವಿದರಿಂದ ಸುಮಧುರ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಮಲ್ಲಣ್ಣ ಶಿವರಾಯಗೌಡ ಹರವಾಳ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಾನಪದ ಗಾಯಕಿ ಶಾಂತಾ ಕುಲ್ಕರ್ಣಿ, ವಚನ ಮತ್ತು ತತ್ವ ಪದಗಳನ್ನು ಮಲ್ಲಣ್ಣ ಶಿವರಾಯಗೌಡ ಹರವಾಳರಿಂದ ಗಜಲ್, ಭಕ್ತಿಗೀತೆ, ಭಾವಗೀತೆಗಳ ಗಾಯನ ನಡೆಯಲಿದೆ.
ಹಿರಿಯ ನ್ಯಾಯವಾದಿ ಶ್ರೀಕಾಂತರಾವ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ಸ್ಮಿತಾ ಅಕ್ಕ, ಹಿರಿಯ ನ್ಯಾಯವಾದಿ ಜೈ.ನೀಲಕಂಠರಾವ್, ತಿಮ್ಮಯ್ಯ ವಕೀಲ, ಬಿ.ನಾಗಪ್ಪ, ಮೋಹನ್ ಸೇರಿ ಅನೇಕರು ಆಗಮಿಸಲಿದ್ದಾರೆ ಎಂದರು.