ಗುಡಿಹಾಳ ಸರ್ಕಾರಿ ಹಿಪ್ರಾ ಶಾಲೆಯಲ್ಲಿ ಗುರುವಾರ ಸಂತೆಕೆಲ್ಲೂರು ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ನಡೆಯಿತು. ಎಸ್ಡಿಎಂಸಿ ಅಧ್ಯಕ್ಷ ಶಿವಕುಮಾರ್ ಚುಕನಟ್ಟಿ, ಮಟ್ಟೂರು ಗ್ರಾಪಂ ಪಿಡಿಒ ತಿಮ್ಮನಗೌಡ, ಶಿವಕುಮಾರ್ ಪಾಟೀಲ್ ಇತರರಿದ್ದರು.
ಮುದಗಲ್: ಕಲಿಕಾ ಹಬ್ಬ ಮಕ್ಕಳ ಪ್ರತಿಭೆ ಅನಾವರಣಗೊಳಿಸಲು ಸೂಕ್ತ ವೇದಿಕೆಯಾಗಿದೆ ಎಂದು ಕೇತ್ರ ಸಮನ್ವಯಾಧಿಕಾರಿ ಹನುಮಂತಪ್ಪ ಕ್ವಾರಿ ಹೇಳಿದರು.
ಸಮೀಪದ ಗುಡಿಹಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಸಂತೆಕೆಲ್ಲೂರು ಪಿಆರ್‌ಸಿ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಕ ಎ.ಆರ್.ಹವಾಲ್ದಾರ್ ಮಾತನಾಡಿ, ಕಲಿಕಾ ಹಬ್ಬ ಸರ್ಕಾರದ ಧೇಯೋದ್ದೇಶಗಳನ್ನು ಸಮರ್ಪಕವಾಗಿ ಈಡೇರಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಿಆರ್‌ಪಿ ಪರಶುರಾಮ ಕೆ. ಮಾತನಾಡಿ, ಕಲಿಕಾ ಹಬ್ಬದಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು.
ಗುಡಿಹಾಳ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಶಿವಕುಮಾರ ಚುಕನಟ್ಟಿ, ಪಿಡಿಒ ತಿಮ್ಮನಗೌಡ, ಮಟ್ಟೂರು ಗ್ರಾಪಂ ಅಧ್ಯಕ್ಷೆ ವಿಜಯಲಕ್ಷ್ಮೀ, ಸದಸ್ಯರಾದ ಈರಣ್ಣ ಅಂಕುಶದೊಡ್ಡಿ, ಶಂಶಾವಲಿ ಹವಾಲ್ದಾರ್, ಸದ್ದಾಂ ಹುಸೇನ್, ಹುಸೇನಪ್ಪ, ಶಿಕ್ಷಣ ಪ್ರೇಮಿಗಳಾದ ಶಿವಕುಮಾರ ಪಾಟೀಲ್, ಮುತ್ತನಗೌಡ ಅಡವಿಬಾವಿ, ಬಿಆರ್‌ಪಿ ಅಬ್ದುಲ್ ಹವಾಲ್ದಾರ್, ಚಂದ್ರಶೇಖರ ರಕ್ಕಸಗಿ ಇತರರಿದ್ದರು.