ಮಾನ್ವಿಯಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರ್ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಮೆರವಣಿಗೆಯಲ್ಲಿ ಶಾಸಕ ಹಂಪಯ್ಯನಾಯಕ, ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಸೈಯದ್ ಸಜ್ಜಾದ್ ಹುಸೇನಿ ಮತವಾಲೆ ಇತರರಿದ್ದರು.
ಮಾನ್ವಿ: ಸಹೋದರತ್ವ, ಸಹಬಾಳ್ವೆ ಮತ್ತು ಗೌರವದ ಬದುಕಿನ ಕುರಿತು ಪ್ರವಾದಿಗಳು ನೀಡಿದ ಸಂದೇಶದಂತೆ ಪ್ರತಿಯೊಬ್ಬರ ಬದುಕಿನಲ್ಲಿ ಶಾಂತಿ, ಸೌಹಾರ್ದ ಮತ್ತು ಸಮೃದ್ಧಿ ನೆಲೆಸಲಿ ಎಂದು ಶಾಸಕ ಹಂಪಯ್ಯ ನಾಯಕ ತಿಳಿಸಿದರು.
ಪಟ್ಟಣದಲ್ಲಿ ಈದ್ ಮಿಲಾದ್ ಅಂಗವಾಗಿ ಆಯೋಜಿಸಿದ್ದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು. ತಾಲೂಕು ಯುವ ಮುಸ್ಲಿಂ ಸಮಾಜ ಸಮಿತಿ ಅಧ್ಯಕ್ಷ ಹಾಗೂ ಧರ್ಮಗುರು ಸೈಯದ್ ಸಜ್ಜಾದ್ ಹುಸೇನಿ ಮತವಾಲೆ ಮಾತನಾಡಿ, ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಬದುಕಿನ ಮೌಲ್ಯಗಳಾದ ಕರುಣೆ, ಸಂಯಮ, ಶಿಸ್ತು, ನೆರೆಯವರ ಹಕ್ಕುಗಳ ಗೌರವ ಕಾಪಾಡುವುದು, ದುರ್ಬಲರ ಕಾಳಜಿ ಹಾಗೂ ಸಮಾಜಕ್ಕೆ ಒಳಿತು ಮಾಡುವ ಮನೋಭಾವವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ತಿಳಿಸಿದರು.
ಟಿಪ್ಪುಸುಲ್ತಾನ್ ವೃತ್ತ, ದರಿಯಾ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಬಸವ ವೃತ್ತದ ಮೂಲಕ ಮಸ್ಜೀದ್ ಎ ಹಸ್‌ನೈನ್‌ವರೆಗೆ ಮೆರವಣಿಗೆ ನಡೆಯಿತು.
ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ವಿವಿಧ ಧರ್ಮಗಳ ಗುರುಗಳು, ತಹಸೀಲ್ದಾರ್ ಭೀಮರಾಯ ಬಿ.ರಾಮಸಮುದ್ರ, ಪಿಐ ಸೋಮಶೇಖರ್ ಎಸ್.ಕೆಂಚರೆಡ್ಡಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಬ್ದುಲ್ ಗಫೂರ್ ಸಾಬ್, ಗುಮ್ಮ ಬಸವರಾಜ ವಕೀಲ, ಸೈಯದ್ ಖಾಲಿದ್ ಖಾದ್ರಿ, ಹುಸೇನ್ ಬಾಷಾ, ರಾಜಾ ಸುಭಾಶ್ಚಂದ್ರನಾಯಕ, ಹುಸೇನ್ ಬಾಷಾ, ಸತ್ತಾರ್ ಬಂಗ್ಲೆವಾಲೆ, ಚಾಂದ್ ಪಾಷಾ, ಕಪಗಲ್ ಮುಸ್ತಫಾ, ರೆಹಮತ ಅಲಿ, ಹಂಪಯ್ಯ ನಾಯಕ್, ಕಾಮೇಶ್, ಅಬ್ಬು ಪಟೇಲ್ ಇನ್ನಿತರರು ಇದ್ದರು.