ಸಿಂಧನೂರಿನಲ್ಲಿ ಗಣರಾಜ್ಯೋತ್ಸವ ಅಂಗವಾಗಿ ವಕೀಲರಿಗೆ ಹಮ್ಮಿಕೊಂಡಿದ್ದ ಚೆಸ್ ಹಾಗೂ ಕೇರಂ ಸ್ಪರ್ಧೆಗೆ ಜಿಲ್ಲಾ ನ್ಯಾಯಾಧೀಶ ಬಿ.ಬಿ.ಜಕಾತಿ ಚಾಲನೆ ನೀಡಿದರು.
ಸಿಂಧನೂರು: ಕ್ರೀಡೆಗಳಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗುವುದರೊಂದಿಗೆ ಕ್ರಿಯಾಶೀಲವಾಗಿರಲು ಸಾಧ್ಯ ಎಂದು ಮೂರನೇ ಹೆಚ್ಚುವರಿ ಜಿಲ್ಲಾ ನ್ಯಾ ಯಾಧೀಶ ಬಿ.ಬಿ.ಜಕಾತಿ ಹೇಳಿದರು.
ನಗರದ ವಕೀಲರ ಸಂಘದ ಕಚೇರಿಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ವಕೀಲರಿಗೆ ಹಮ್ಮಿಕೊಂಡಿದ್ದ ಚೆಸ್ ಹಾಗೂ ಕೇರಂ ಸ್ಪ ರ್ಧೆಗೆ ಚಾಲನೆ ನೀಡಿ ಮಾತನಾಡಿದರು.
ಪ್ರತಿ ಮನುಷ್ಯ ಆರೋಗ್ಯವಾಗಿರಬೇಕೆಂದರೆ ಕ್ರೀಡೆಗಳು ಅವಶ್ಯಕ. ಇದರಿಂದ ಆರೋಗ್ಯ ಸುಧಾರಣೆಯಾಗುತ್ತ ದೆ. ನಿಯಮಿತ ವ್ಯಾಯಾಮ ಮಾಡುವುದರಿಂದ ರೋಗಮುಕ್ತ ಜೀವನ ಸಾಗಿಸಬಹುದು ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶೆ ರೂಪಾ ಸಿ. ವಗ್ಗಾ ಮಾತನಾಡಿ, ಕ್ರೀಡಾಪಟುಗಳು ಸ್ಪರ್ಧಾತ್ಮಕವಾಗಿ ಆಟಗಳಲ್ಲಿ ಭಾಗವಹಿಸಬೇಕು. ಆಟದಲ್ಲಿ ಪೈಪೋಟಿ ಆರೋಗ್ಯ ಪೂರ್ಣವಾಗಿರಬೇಕು. ಸೋಲು ಗೆಲುವು ಸಮಾನವಾಗಿ ಸ್ವೀಕರಿಸುವ ಮನೋಭಾವ ಎಲ್ಲರೂ ಹೊಂದಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ಕೆ.ಭೀಮನಗೌಡ, ಮಾಜಿ ಅಧ್ಯಕ್ಷ ಎನ್.ರಾಮನಗೌಡ, ಮಸ್ಕಿ ವಕೀಲರ ಸಂಘದ ಅಧ್ಯಕ್ಷ ಎಚ್.ವೀರಭದ್ರಪ್ಪ, ಸಿಂಧನೂರು ವಕೀಲರ ಸಂಘದ ಉಪಾಧ್ಯಕ್ಷ ಜಗದೀಶ, ಜಂಟಿ ಕಾರ್ಯದರ್ಶಿ ಹೀನ ಅಮ್ರಿನ್ ದೇಸಾಯಿ, ಖಜಾಂಚಿ ಚಂದ್ರಶೇಖರ ಗಡಾದ್, ಹಿರಿಯ ವಕೀಲರಾದ ಎಂ.ಅಮರೇಗೌಡ, ಅಜಯಕುಮಾರ ಗದ್ರಟಗಿ, ಶರಣಬಸವ ಉಮಲೂಟಿ, ವೈ.ಎಸ್.ಕೆ.ಮಹಿನುದ್ದೀನ್, ರಾಜು, ಜಡಿಯಪ್ಪ ಹೂಗಾರ, ಸಾಲೋಮನ್, ವೆಂಕೋಬ ಇತರರಿದ್ದರು.
ವಿವಿಧ ಸ್ಪರ್ಧೆಗಳ ವಿಜೇತರು: ಕೇರಂ ಸಿಂಗಲ್ ಪುರುಷರ ಪಂದ್ಯದಲ್ಲಿ ವೈ.ಎಸ್.ಕೆ.ಮೊಹಿನುದ್ದೀನ್, ಶಿವಶಂಕರ ಹಸ್ಮಕಲ್ ಹಾಗೂ ಡಬಲ್ ಪುರುಷರ ಪಂದ್ಯ: ವೈ.ಎಸ್. ಕೆ.ಮೊಹಿನುದ್ದೀನ್-ಬಸವರಾಜ ಆಲೂರು ಹಾಗೂ ಜಡಿಯಪ್ಪ ಹೂಗಾರ-ಹನುಮೇಶ ಕಟಾಲಿ ಕ್ರಮವಾಗಿ ಪ್ರಥಮ-ದ್ವಿತೀಯ ಸ್ಥಾನ ಪಡೆದಿದ್ದಾರೆ. ಚೆಸ್ ಪುರುಷರ ಪಂದ್ಯದಲ್ಲಿ ಎಂ.ನಾಗರಾಜ, ನಾರಾಯಣರಾವ್ ಹಾಗೂ ಮಹಿಳೆಯರ ಕೇರಂ ಬೋರ್ಡ್ ಡಬಲ್ಸ್‌ನಲ್ಲಿ ನಾಜಿಯಾ-ಬಸವಲಿಂಗೇಶ್ವರಿ, ರೇಷ್ಮಾ ಮತ್ತು ಶ್ರುತಿ, ಮಹಿಳೆಯರ ಲೇಮನ್ ಸ್ಪೂನ್ ಪಂದ್ಯದಲ್ಲಿ ಅನುರಾಧ-ರುಬಿಯಾ ಪ್ರಥಮ, ದ್ವೀತಿಯ ಸ್ಥಾನ ಪಡೆದರು. ಮಹಿಳೆಯರ ನಿಧಾನ ನಡಿಗೆಯಲ್ಲಿ ಬಸವಲಿಂಗೇಶ್ವರಿ-ಪ್ರಥಮ, ರೇಷ್ಮಾ-ದ್ವಿತೀಯ. ಮ್ಯೂಸಿಕಲ್ ಚೇರ್ ಪಂದ್ಯದಲ್ಲಿ ನಾಜಿಯಾ ಪ್ರಥಮ, ಹೀನಾ ಅಮ್ರಿನ್ ದೇಸಾಯಿ ದ್ವಿತೀಯ ಸ್ಥಾನ ಪಡೆದಿದ್ದಾರೆ ಎಂದು ಸಂಘದ ಕಾರ್ಯದರ್ಶಿ ದುರುಗೇಶ ತುರ್ವಿಹಾಳ ತಿಳಿಸಿದ್ದಾರೆ.