ಲಿಂಗಪ್ಪ ಪರಂಗಿ  
ರಾಯಚೂರು

ಬೆಂಗಳೂರಲ್ಲಿ ಬೃಹತ್ ಪ್ರತಿಭಟನೆ ಮಾ.25ಕ್ಕೆ

ನರೇಶ್ ಕುಮಾರ್
ಲಿಂಗಸುಗೂರು: ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿ ಅವೈಜ್ಞಾನಿಕ, ದೋಷಪೂರಿತವಾಗಿದ್ದು ತಿರಸ್ಕರಿಸಬೇಕೆಂದು ಆಗ್ರಹಿಸಿ ಮಾ.25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಬಲಗೈ ಸಮುದಾಯದ ಪ್ರಮುಖ ಲಿಂಗಪ್ಪ ಪರಂಗಿ ಹೇಳಿದರು. 
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳಿಗೆ ಅವೈಜ್ಞಾನಿಕ ಒಳಮೀಸಲಾತಿ ಹಾಗೂ ರೋಸ್ಟರ್ ಪದ್ಧತಿ ಜಾರಿ ಮಾಡಿದೆ. 
ಇದು ಎಸ್ಸಿ ಒಳಮೀಸಲಾತಿ ವರ್ಗೀಕರಣದಲ್ಲಿ ಸಿ-ಪ್ರವರ್ಗದಲ್ಲಿರುವ ಬಂಜಾರ, ಭೋವಿ, ಕೊರಚ, ಕೊರಮ, ಆದಿಯಾ, ಅಗೇರ ಸೇರಿದಂತೆ 63 ಜಾತಿಗಳಿಗೆ ಮಾರಕವಾಗಿದೆ. 
ಈ ಅನ್ಯಾಯ ಸರಿಪಡಿಸಲು ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದು, ತಾಲೂಕಿನ ಸಮುದಾಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಿದರು. 
ಮುಖಂಡರಾದ ಶಿವಪ್ಪ ಮಾಚನೂರು, ಆದಪ್ಪ ನಗನೂರು, ಗಂಗಾಧರ, ಚಿದಾನಂದ ಕಸಬಾ ಲಿಂಗಸುಗೂರು ಇತರರಿದ್ದರು.