ಹರನಹಳ್ಳಿ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವಕ್ಕೆ ಶ್ರೀ ರೇಣುಕ ಶಾಂತಮಲ್ಲ ಶಿವಾಚಾರ್ಯರು ಚಾಲನೆ ನೀಡಿದರು. ರಾಯಚೂರು ಸೋಮವಾರ ಪೇಟೆ ಹಿರೇಮಠದ ಅಭಿನವ ಶ್ರೀ ರಾಚೋಟಿ ಶಿವಾಚಾರ್ಯರು ಇದ್ದರು.
- ರಾಮಲಿಂಗೇಶ್ವರ ದೇವಸ್ಥಾನ
- ದೀಪೋತ್ಸವ
- ಮಾನ್ವಿ
ಸನ್ಮಾರ್ಗದಲ್ಲಿ ನಡೆದರೆ ಬದುಕು ಸುಂದರ
ಮಾನ್ವಿ: ಕತ್ತಲಿನಿಂದ ಬೆಳಕಿನ ಕಡೆ ಸಾಗಬೇಕೆಂದರೆ ನಮ್ಮ ಮನಸ್ಸಿನಲ್ಲಿಯೂ ಜ್ಞಾನದ ದೀಪ ಬೆಳಗಬೇಕು ಎಂದು ನಿಲೋಗಲ್ ಸಂಸ್ಥಾನ ಬೃಹನ್ಮಠದ ರೇಣುಕ ಶಾಂತಮಲ್ಲ ಶಿವಾಚಾರ್ಯರು ಹೇಳಿದರು.
ತಾಲೂಕಿನ ಹರನಹಳ್ಳಿ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಮಂಗಳವಾರ ಐದನೇ ವರ್ಷದ ದೀಪೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ನಮ್ಮ ದೇಶದ ಸಂಸ್ಕೃತಿ ವಿಶೇಷವಾಗಿದ್ದು, ಇಲ್ಲಿನ ಕುರುಹುಗಳು ವಿಶ್ವದಲ್ಲೆಡೆ ಕಾಣಬಹುದು. ಮಲೇಶಿಯಾದಲ್ಲಿ ಶ್ರೀರಾಮನ ಪಾದವನ್ನು ಹಣೆಗಿಟ್ಟುಕೊಂಡು ಪ್ರಮಾಣ ಮಾಡುವ ಪದ್ಧತಿ ಇಂದಿಗೂ ಇದೆ. ಸಕಾರಾತ್ಮಕ ಆಲೋಚನೆಯಿಂದ ಒಳ್ಳೆಯ ಮಾರ್ಗದಲ್ಲಿ ನಡೆದಾಗ ಮಾತ್ರ ಜೀವನ ಸುಂದರವಾಗಿರುತ್ತದೆ ಎಂದು ತಿಳಿಸಿದರು.
ಬೆಳಗ್ಗೆ ಶ್ರೀ ರಾಮಲಿಂಗೇಶ್ವರ ಸ್ವಾಮಿ ಮೂರ್ತಿಗೆ ರುದ್ರಾಭಿಷೇಕ, ಮಹಾಮಂಗಳಾರತಿ ಸೇರಿದಂತೆ ವಿಶೇಷ ಪೂಜೆ ಕಾರ್ಯಗಳು ನಡೆದವು. ಸಂಜೆ ದೀಪೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ರಾಯಚೂರು ಸೋಮವಾರ ಪೇಟೆ ಹಿರೇಮಠದ ಅಭಿನವ ಶ್ರೀ ರಾಚೋಟಿ ಶಿವಾಚಾರ್ಯರು ಆಶೀರ್ವಚನ ನೀಡಿದರು. ಅರ್ಚಕ ಅಮರೇಶ ತಾತ, ಪ್ರಮುಖರಾದ ಸೋಮಶೇಖರ್ ಪಾಟೀಲ್, ರಾಜಪ್ಪ ಗೌಡ, ಪಂಪಣ್ಣಗೌಡ, ಪ್ರಕಾಶ್ ತಾತ, ದೊಡ್ಡ ಯಲ್ಲಯ್ಯ ಇತರರಿದ್ದರು.