ಹಿರೇಕೊಟ್ನೆಕಲ್‌ನಲ್ಲಿ ತಹಸೀಲ್ದಾರ್ ಭೀಮರಾಯ ರಾಮಸಮುದ್ರಗೆ ರೈತ ಸಂಘದಿಂದ ಮನವಿ ಸಲ್ಲಿಸಲಾಯಿತು. ಪ್ರಮುಖರಾದ ಅಮೀನ್‌ಪಾಷಾ ದಿದ್ದಗಿ, ಹೊಳೆಯಪ್ಪ ಉಟಕನೂರು, ಹುಲಿಗೆಯ್ಯ ನಾಯಕ, ಶ್ಯಾಮ್ ಸಿಂಗ್, ಬುಜ್ಜಿಗೌಡ ಪೋತ್ನಾಳ ಇತರರಿದ್ದರು.
- ರೈತ ಸಂಘದ ಪ್ರ.ಕಾರ್ಯದರ್ಶಿ ಅಮೀನ್‌ಪಾಷಾ ದಿದ್ದಗಿ ಎಚ್ಚರಿಕೆ
- ಹಿರೇಕೊಟ್ನೆಕಲ್‌ನಲ್ಲಿ ಪ್ರತಿಭಟನೆ
ಮಾನ್ವಿ: ರೈತರಿಂದ ಖರೀದಿ ಮಾಡಿದ ಜೋಳದ ಹಣ ವಾರದೊಳಗೆ ಖಾತೆಗೆ ಸಂದಾಯ ಮಾಡದಿದ್ದರೆ ಮಾನ್ವಿ ಬಂದ್‌ಗೆ ಕರೆ ನೀಡಲಾಗುವುದು ಎಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮೀನ್‌ಪಾಷಾ ದಿದ್ದಗಿ ಎಚ್ಚರಿಕೆ ನೀಡಿದರು.
ಹಿರೇಕೊಟ್ನೆಕಲ್ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ತಹಸೀಲ್ದಾರ್ ಭೀಮರಾಯ ರಾಮಸಮುದ್ರಗೆ ಮನವಿ ಸಲ್ಲಿಸಿ ಮಾತನಾಡಿದರು. ನಾಲ್ಕು ತಿಂಗಳು ಕಳೆದರೂ ಜೋಳದ ಹಣ ಪಾವತಿಯಾಗಿಲ್ಲ. ರೈತರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಮುಂಗಾರು ಹಂಗಾಮು ಆರಂಭವಾಗಿದ್ದು, ಬಿತ್ತನೆ ಹಾಗೂ ಕೃಷಿ ಚಟುವಟಿಕೆಗಳಿಗೆ ತುರ್ತಾಗಿ ಹಣದ ಅವಶ್ಯಕತೆಯಿದೆ ಎಂದರು.
ತಹಸೀಲ್ದಾರ್ ಭೀಮರಾಯ ರಾಮಸಮುದ್ರ ಮಾತನಾಡಿ, ಈ ಬಗ್ಗೆ ಅತಿ ಶೀಘ್ರದಲ್ಲಿಯೇ ಮೇಲಧಿಕಾರಿಗಳ ಗಮನಕ್ಕೆ ತಂದು ರೈತರ ಖಾತೆಗಳಿಗೆ ಹಣ ಜಮೆ ಆಗುವಂತೆ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ವೈ. ಬಸವರಾಜ ನಾಯಕ, ತಾಲೂಕು ಅಧ್ಯಕ್ಷ ಹೊಳೆಯಪ್ಪ ಉಟಕನೂರು, ಬಸವರಾಜ ಹಂಚಿನಾಳ, ವೀರೇಶ ನಾಯಕ, ಉರಕುಂದ ನಾಯಕ, ಹುಲಿಗೆಯ್ಯ ನಾಯಕ, ಶ್ಯಾಮ್‌ಸಿಂಗ್, ಬುಜ್ಜಿಗೌಡ ಪೋತ್ನಾಳ, ಶಿವಪ್ಪ ನುಗುಡೋಣಿ, ಹನುಮಂತರಾಯ ಬಲ್ಲಟಗಿ, ಶ್ರೀಧರ ಕೊಟ್ನೆಕಲ್, ರಾಜು, ನಾಗರಾಜ ಭೋವಿ, ವೀರೇಶ ಸಂಗಾಪುರ, ಸಿದ್ದಪ್ಪ ಅಮರಾವತಿ ಇದ್ದರು.