AYYANNA MAHAMANI 
ರಾಯಚೂರು

ಆರ್‌ಟಿಪಿಎಸ್ ಕಾರ್ಮಿಕರ ಗುತ್ತಿಗೆ ಕಾರ್ಮಿಕರನ್ನು ಖಾಯಂ ಮಾಡಲಿ

ರಾಚಯ್ಯ ಸ್ವಾಮಿ
ರಾಯಚೂರು ರಾಯಚೂರಿನ ಆರ್‌ಟಿಪಿಎಸ್‌ನಲ್ಲಿ ಕಳೆದ 10 ವರ್ಷಗಳಿಗಿಂತ ಹೆಚ್ಚುವ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕರು ಖಾಯಂ ಸೇರಿದಂತೆ ಗ್ರಾಚ್ಯುಟಿ ಬಿಡುಗಡೆಗೆ ಅನೇಕ ಬಾರಿ ಮನವಿ ಮಾಡಿದರೂ ಸ್ಪಂದನೆ ದೊರೆಯದೇ ಇರುವದರಿಂದ ಕೆಲಸ ಸ್ಥಗಿತಗೊಳಿಸಿ ಮುಷ್ಕರಕ್ಕೆ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನಿರ್ಧರಿಸಿದೆಂದು ಆರ್‌ಟಿಪಿಎಸ್ ಗುತ್ತಿಗೆ ಕಾರ್ಮಿಕರ ಮಹಾಸಂಘದ ಜಿಲ್ಲಾಧ್ಯಕ್ಷ ಅಯ್ಯಣ್ಣ ಮಹಾಮನಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗುತ್ತಿಗೆ ಕಾರ್ಮಿಕರ ವಿವಿಧ ಬೇಡಿಕೆಗಳಿಗೆ ಆಡಳಿತ ವರ್ಗ ಸೇರಿದಂತೆ ಅನೇಕ ಬಾರಿ ಮನವಿ ನೀಡಿದರೂ ಕನಿಷ್ಟ ಸ್ಪಂದನೆ ದೊರೆಕಿಲ್ಲ. ಗುತ್ತಿಗೆ ಕಾರ್ಮಿಕರ ಸಲಹಾ ಮಂಡಳ ವರದಿ ಆಧಾರವಾಗಿ 109 ಕಾರ್ಮಿಕರ ಖಾಯಂಯಾತಿ. 33 ನೌಕರರ ಗ್ರಾಚ್ಯುಟಿ, ಪಿಎಫ್ ಸೇರಿ ಅನೇಕ ಬೇಡಿಕೆಗಳಿಗೆ ಇಡೇರದೇ ಹೋಗಿವೆ. ಇಂಧನ ಸಚಿವರು ಹಾಗೂ ಕಾರ್ಮಿಕ ಸಚಿವರಿಗೂ ಸಮಸ್ಯೆಗಳನ್ನು ತಿಳಿಸಲಾಗಿದೆ.
ಆದರೂ ಸಮಸ್ಯೆ ಪರಿಹಾರವಾಗುತ್ತಿಲ್ಲ. ಈಗಾಗಲೇ ಮುಷ್ಕರ ನೋಟಿಸ್ ಜಾರಿಗೊಳಿಸಲಾಗಿದೆ. ಕೂಡಲೇ ಆಡಳಿತ ಮಂಡಳಿ ಸ್ಪಂದಿಸಿ ಮಾತುಕತೆ ಮುಂದಾಗದೇ ಹೋದಲ್ಲಿ ಮಾ.12 ಗೇಟ್ ಸಭೆ, 13 ರಂದು ಕೆಲಸ ಸ್ಥಗಿತಗೊಳಿಸಿ ಹೋರಾಟ ನಡೆಸುವದಾಗಿ ಎಚ್ಚರಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಬಿ. ಪಾಟೀಲ್ ಮಾತನಾಡಿ, ಆರ್‌ಟಿಪಿಎಸ್‌ನಲ್ಲಿ ಕಾರ್ಯನಿರ್ವಹಿಸಿ ನಿವೃತರಾದವರು, ಮೃತ ಕುಟುಂಬಗಳಿಗೆ ಗ್ರಾಚ್ಯುಟಿ ನೀಡಿಲ್ಲ. ಕಾರ್ಮಿಕ ಕಾಯ್ದೆ ಅನ್ವರಯು ಕನಿಷ್ಟ ವೇತನವೂ ನೀಡುತ್ತಿಲ್ಲ. ಈ ಕುರಿತು ಮಾಹಿತಿ ಕೇಳಿದರೂ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಕೆಲಸ ಆಡಳಿತ ಮಂಡಳಿ ಮಾಡುತ್ತಿದೆ. ಆಡಳಿತ ಮಂಡಳಿಯ ವಿರುದ್ದ ಈಗಾಗಲೇ ದೂರು ನೀಡಲಾಗಿದೆ. ತನಿಖೆಗೆ ಲೋಕಾಯುಕ್ತರಿಗೂ ದೂರು ಸಲ್ಲಿಸಲಾಗಿದೆ. ಕೂಡಲೇ ಸ್ಪಂದಿಸದೇ ಇದ್ದರೆ ತೀವ್ರ ತರಹದ ಗುತ್ತಿಗೆ ನೌಕರರ ಹೋರಾಟ ಅನಿವಾರ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಜೆ.ವಿ.ಎಲ್.ರೆಡ್ಡಿ, ಪ್ರಮುಖರಾದ ಎ.ವೈ.ಮಲ್ಲಪ್ಪ ಧಣಿ, ಅರಳಪ್ಪ, ನಾಗರಾಜ, ಭೀಮರೆಡ್ಡಿ, ಸುನೀಲ ಕುಮಾರ ಇದ್ದರು.