ಮುದಗಲ್‌ನಲ್ಲಿ ಸಾರ್ವಜನಿಕ ಅಲೆಮಾರಿ ಗ್ರಂಥಾಲಯವನ್ನು ಶಾಸಕ ಮಾನಪ್ಪ ವಜ್ಜಲ್ ಮಂಗಳವಾರ ಉದ್ಘಾಟಿಸಿದರು. ಗ್ರಂಥಾಲಯದ ಅಧಿಕಾರಿ ಸಿದ್ಧಾರ್ಥ ಬಾವಿಕಟ್ಟಿ, ನರಸರೆಡ್ಡಿ, ಸೋಮಶೇಖರ್ ಯಳವಾರ, ಬಸರೆಡ್ಡಪ್ಪ, ಗ್ಯಾನಪ್ಪ ದಫೇದಾರ್ ಇದ್ದರು.  
ರಾಯಚೂರು

ಗ್ರಂಥಾಲಯ ಸದುಪಯೋಗ ಪಡೆಯಿರಿ

ನರೇಶ್ ಕುಮಾರ್
ಮುದಗಲ್: ಪಟ್ಟಣದ ನೀಲಕಂಠೇಶ್ವರ ದೇವಸ್ಥಾನದ ಎಡಭಾಗದಲ್ಲಿ ಎಸ್ಸಿಪಿ-ಟಿಎಸ್ಪಿ ಅನುದಾನದಡಿ 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸಾರ್ವಜನಿಕ ಅಲೆಮಾರಿ ಗ್ರಂಥಾಲಯ ಕಟ್ಟಡವನ್ನು ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್ ಮಂಗಳವಾರ ಸರಸ್ವತಿ ಪೂಜೆ ಸಲ್ಲಿಸುವ ಮೂಲಕ ಉದ್ಘಾಟನೆ ಮಾಡಿದರು.
ಗ್ರಂಥಾಲಯದಲ್ಲಿ ದೈನಂದಿನ ಪತ್ರಿಕೆ, ಕಥೆ, ಕಾದಂಬರಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ಪೂರಕವಾದ ಪುಸ್ತಕಗಳು ಇದ್ದು, ಯುವಕರು, ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. 
ಪ್ರಮುಖರಾದ ಗಿರಿಮಲ್ಲನ ಗೌಡ, ನಾಗಭೂಷಣ, ಅಯ್ಯಪ್ಪ ಮಾಳೂರು, ಕರಿಯಪ್ಪ ಯಾದವ್, ಪರಶುರಾಮ ಕೆಂಭಾವಿ, ಸಣ್ಣ ಸಿದ್ದಯ್ಯ, ಮಲ್ಲಿಕಾರ್ಜುನ ಮಾಟೂರು, ಮಲ್ಲಪ್ಪ ಹೂಗಾರ, ನಾಗರಾಜ ತಳವಾರ, ಮಂಜುನಾಥ ನಂದವಾಡಗಿ, ಚಂದಾವಲಿಸಾಬ್ ಜಂಗ್ಲಿ, ಕಾಂತಕುಮಾರ್ ಪತ್ತಾರ, ಅಮೀನ್ ಅರಗಂಜಿ ಇತರರಿದ್ದರು.