ಎಂಎಲ್ಸಿ ಎನ್.ಎಸ್.ಬೋಸರಾಜು ಅವರು ತುಂಗಭದ್ರಾ ಎಡದಂಡೆ ಮುಖ್ಯನಾಲೆ ಮೈಲ್ 69ರಲ್ಲಿ ನೀರಿನ ಗೇಜ್ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. 
ರಾಯಚೂರು

ಸಮರ್ಪಕ ಗೇಜ್ ಕಾಯ್ದುಕೊಳ್ಳಿ

ಕವಿತಾಳ: ತುಂಗಭದ್ರಾ ಎಡದಂಡೆ ಮುಖ್ಯನಾಲೆ ಮೈಲ್ 47 ಮತ್ತು 69ರಲ್ಲಿ ಅಗತ್ಯ ಗೇಜ್ ಕಾಯ್ದುಕೊಂಡು ಸಿರವಾರ ಹಾಗೂ ಮಾನ್ವಿ ಭಾಗದ ರೈತರಿಗೆ ಸಮರ್ಪಕವಾಗಿ ನೀರು ತಲುಪಿಸಬೇಕು ಎಂದು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಎಂಎಲ್ಸಿ, ಮಾಜಿ ಸಚಿವ ಎನ್.ಎಸ್ ಬೋಸರಾಜು ಸೂಚಿಸಿದರು.

ಮುಖ್ಯನಾಲೆಯ ವಿವಿಧ ಮೈಲ್‌ಗಳಲ್ಲಿ ನೀರಿನ ಪ್ರಮಾಣ ಪರಿಶೀಲಿಸಿ ಮಾತನಾಡಿದರು. ಮೈಲ್ 47ರಲ್ಲಿ 12 ಅಡಿ ಬದಲಿಗೆ 11 ಅಡಿಯಿದೆ. ಮೈಲ್ 69ರಲ್ಲಿ 9 ಅಡಿ ನೀರು ಇರಬೇಕಿದ್ದು, 7.9 ಅಡಿ ಇದೆ. ಮೈಲ್ 90ರಲ್ಲಿ ಐದು ಅಡಿ ಬದಲಿಗೆ ಮೂರು ಅಡಿ ನೀರು ಹರಿಯುತ್ತಿದೆ. ಮೈಲ್ 47 ಮತ್ತು 69 ರಲ್ಲಿ ಅಗತ್ಯ ಪ್ರಮಾಣದ ಗೇಜ್ ಕಾಯ್ದುಕೊಳ್ಳಬೇಕು ಎಂದು ತಾಕೀತು ಮಾಡಿದರು.

ಎಇಇಗಳಾದ ವಿಜಯಲಕ್ಷ್ಮೀ, ದಾವೂದ್, ವಿದ್ಯಾಸಾಗರ, ಪ್ರಮುಖರಾದ ಶರಣಯ್ಯ ಗುಡದಿನ್ನಿ, ಚುಕ್ಕಿ ಸೂಗಪ್ಪ ಸಿರವಾರ, ಶ್ರೀನಿವಾಸ ಜಾಲಾಪೂರ, ಬೀರಪ್ಪ, ಜಿಪಂ ಮಾಜಿ ಸದಸ್ಯ ಕಿರಿಲಿಂಗಪ್ಪ ಇದ್ದರು.