ಸಿಂಧನೂರಿನ ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷರಾಗಿ ಎಂ.ದೊಡ್ಡಬಸವರಾಜ ಹಾಗೂ ಉಪಾಧ್ಯಕ್ಷ ರಾಗಿ ಸಿದ್ದನಗೌಡ ಮಾಟೂರು ಆಯ್ಕೆಗೊಂಡರು. ತಹಸೀಲ್ದಾರ್ ಅರುಣ ದೇಸಾಯಿ, ಸಹಾಯಕ ಚುನಾವಣಾಧಿಕಾರಿ ಕಿರಣಕುಮಾರ, ವ್ಯವಸ್ಥಾಪಕ ಮಲ್ಲಯ್ಯ ಹಾಗೂ ನಿರ್ದೇಶಕರು ಇದ್ದಾರೆ.
ಸಿಂಧನೂರು: ಸ್ಥಳೀಯ ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷರಾಗಿ ಎಂ.ದೊಡ್ಡಬಸವರಾಜ ಹಾಗೂ ಉಪಾಧ್ಯಕ್ಷರಾಗಿ ಸಿದ್ದನಗೌಡ ಮಾಟೂರು ಮೂರನೇ ಅವಧಿಗೆ ಅವಿರೋಧವಾಗಿ ಮರುಆಯ್ಕೆಗೊಂಡರು.
ಪಿಎಲ್‌ಡಿ ಬ್ಯಾಂಕ್ ಕಚೇರಿಯಲ್ಲಿ ಚುನಾವಣಾಧಿಕಾರಿಯಾದ ತಹಸೀಲ್ದಾರ್ ಅರುಣ ದೇಸಾಯಿ ಚುನಾವಣಾ ಪ್ರಕ್ರಿಯೆ ನಡೆಸಿದರು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದು ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆಯನ್ನು ಘೋಷಿಸಿದರು.
ಅಧ್ಯಕ್ಷ ಎಂ.ದೊಡ ್ಡಬಸವರಾಜ ಮಾತನಾಡಿ, ರೈತರು ಹಾಗೂ ಎಲ್ಲ ನಿರ್ದೇಶಕರು, ಹಿರಿಯರ ಸಹಕಾರದೊಂದಿಗೆ ಬ್ಯಾಂಕ್ ಮುನ್ನೆಡೆಸಿಕೊಂಡು ಹೋಗಲಾಗುವುದು. ಸಣ್ಣ ಮತ್ತು ಅತಿಸಣ್ಣ ರೈತರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲಾಗುವುದು. ಮುಖ್ಯವಾಗಿ ಅವಕಾಶ ವಂಚಿತರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. 2026 ರಿಂದ 2031 ರವರೆಗೆ ಉತ್ತಮವಾಗಿ ಆಡಳಿತ ನೀಡಲಾಗುವುದು ಎಂದು ತಿಳಿಸಿದರು.
ನಿರ್ದೇಶಕರುಗಳು ಅವಿರೋಧ ಆಯ್ಕೆ : ಪಿಎಲ್‌ಡಿ ಬ್ಯಾಂಕಿಗೆ ಎಲ್ಲ ನಿರ್ದೇಶಕರೂ ಕೂಡ ಅವಿರೋಧವಾಗಿಯೇ ಆಯ್ಕೆಯಾಗಿದ್ದಾರೆ. ಸಾಲಗುಂದಾ ಕ್ಷೇತ್ರದಿಂದ ಕೆ.ಕರಿಲಿಂಗಪ ್ಪ, ಗುಡುದೂರು-ರಮೇಶ ಅಮರಪ್ಪ, ಮಾಡಶಿರವಾರ-ರಾಮಣ್ಣ ಗಿಣಿವಾರ, ಜವಳಗೇರಾ- ರೇವಣಸಿದ್ದಪ್ಪ, ಬಳಗಾನೂರು-ಲಿಂಗಪ್ಪ, ಕುನ್ನಟಗಿ-ವೆಂಕಣ್ಣ ತಿಪ ್ಪನಹಟ್ಟಿ, ಹುಡಾ-ರಮೇಶ ಮುಕ್ಕುಂದಾ, ವಲ್ಕಂದಿನ್ನಿ-ಹನುಮಂತಮ್ಮ ಮಣ್ಣಿಕೇರಿಕ್ಯಾಂಪ್, ಗೊರೇಬಾಳ-ಶಿವಪ್ಪ ಸಾಸಲಮರಿ, ತುರ್ವಿಹಾಳ-ಲಲಿತಮ್ಮ ಉಮಲೂಟಿ, ಜಾಲಿಹಾಳ-ಹೇಮಾವತಿ ಭೀಮರಾಜ ಕ್ಯಾಂಪ್, ಕೆ.ಬಸಾಪರ ಕ್ಷೇತ್ರದಿಂದ ಈರಣ್ಣ ನಿರ್ದೇಶಕರಾಗಿ ಅವಿರೋಧ ಆಯ್ಕೆಗೊಂಡರು. ಸಹಾ ಯಕ ಚುನಾವಣಾಧಿಕಾರಿ ಕಿರಣಕುಮಾರ, ವ್ಯವಸ್ಥಾಪಕ ಮಲ್ಲಯ್ಯ ಇದ್ದರು.