ರಾಯಚೂರಿನ ಖಾಸಗಿ ಗ್ಯಾಸ್ ಬಂಕ್‌ನಲ್ಲಿ ಆಟೋಗಳು ಗ್ಯಾಸ್ ತುಂಬಿಸಲು ನಿಂತಿರುವುದು.
ರಾಯಚೂರು ಇರಾನ್ ಮೇಲಿನ ದಾಳಿಯಿಂದಾದ ತೈಲೋತ್ಪನ್ನಗಳ ಕೊರತೆ ಅಭಾವದ ಬಿಸಿ ಜಿಲ್ಲೆಯ ಆಟೋ ಚಾಲಕರಿಗೆ ತಟ್ಟಲಾರಂಭಿಸಿದೆ.
ಇರಾನ್ - ಇಸ್ರೇಲ್ ಯುದ್ಧ ಆರಂಭವಾದ ನಾಲ್ಕು ದಿನದಲ್ಲಿ ಎಲ್ಪಿಜಿ ದರ ಲೀಟರ್‌ಗೆ 20 ರೂಪಾಯಿ ಹೆಚ್ಚಳವಾಗಿದೆ. ಈ ಹಿಂದೆ ಲೀಟರ್‌ಗೆ 74 ರೂ. ಇತ್ತು ಆದರೆ ಇದೀಗ ಲೀ. 94 ರೂ. ವರೆಗೆ ಗ್ಯಾಸ್ ಬಂಕ್ ಮಾಲೀಕರು ಮಾರಾಟ ಮಾಡುತ್ತಿದ್ದಾರೆ.
ಗ್ಯಾಸ್ ಬಂಕ್‌ಗಳಿಗೆ ಕಳೆದ ಒಂದು ವಾರದದಿಂದ ಗ್ಯಾಸ ಟ್ಯಾಂಕರ್ ಬಂದಿಲ್ಲ. ತಿಂಗಳಿಗೆ ಬರುತ್ತಿದ್ದ 10 ಟನ್ ಗ್ಯಾಸ್‌ನಲ್ಲಿ ಈ ಬಾರಿ ಒಂದು ಟನ್ ಗ್ಯಾಸ್ ಮಾತ್ರ ಬಂದಿದ್ದು, ಸದ್ಯ ಸ್ಟಾಕ್ ಇರುವ ಗ್ಯಾಸ್ ಇನ್ನೂ ನಾಲ್ಕು ದಿನಗಳಿಗೆ ಮಾತ್ರ ಸಾಲುತ್ತಿರುವುದರಿಂದ ಆಟೋ ಚಾಲಕರು ದುಬಾರಿ ಗ್ಯಾಸ್ ಬಳಸಿ ಆಟೋ ಚಾಲನೆ ಮಾಡಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.