ಸಿಂಧನೂರಿನಲ್ಲಿ ಹಮ್ಮಿಕೊಂಡಿರುವ ಮುಂಗಾರು ಕಾರಹುಣ್ಣಿಮೆ ಸಂಭ್ರಮ ಕಾರ್ಯಕ್ರಮಕ್ಕೆ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಚಾಲನೆ ನೀಡಿದರು. ಜಿಪಂ ಮಾಜಿ ಸದಸ್ಯ ಎನ್.ಶಿವನಗೌಡ ಗೊರೇಬಾಳ, ಖಾಜಿ ಮಲ್ಲಿಕ್ ವಕೀಲ, ಶರಣಪ್ಪ ರಡ್ಡೇರ್ ಇತರರಿದ್ದರು. 
ರಾಯಚೂರು

ಒಕ್ಕಲುತನ ಉಳಿದರಷ್ಟೇ ದೇಶಕ್ಕೆ ಸುಭಿಕ್ಷೆ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಅನಿಸಿಕೆ
  • ಮುಂಗಾರು ಕಾರಹುಣ್ಣಿಮೆ ಸಂಭ್ರಮ
ಸಿಂಧನೂರು: ಅನ್ನ ನೀಡುವ ರೈತನ ಕೆಲಸ ದೇಶಕ್ಕೆ ಜೀವಾಳವಾಗಿದ್ದು, ಒಕ್ಕಲುತನ ಉಳಿದರೆ ಮಾತ್ರ ಸುಭಿಕ್ಷೆ ದೊರೆಯಲಿದೆ ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು.
ಎಪಿಎಂಸಿ ದನದ ಹಳೇ ಸಂತೆ ಮಾರುಕಟ್ಟೆ ಜಾಗದಲ್ಲಿ ತಾಲೂಕು ರೈತ ಕಾರಹುಣ್ಣಿಮೆ ಸಾಂಸ್ಕೃತಿಕ ಕ್ರೀಡಾ ಉತ್ಸವ ಟ್ರಸ್ಟ್ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಹಮ್ಮಿಕೊಂಡಿರುವ ಜಿಲ್ಲಾ ಮಟ್ಟದ ಮುಂಗಾರು ಕಾರಹುಣ್ಣಿಮೆ ಸಂಭ್ರಮ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು.
ದೇಶದ ಆರ್ಥಿಕ ವ್ಯವಸ್ಥೆ ಕೃಷಿ ಮೇಲೆ ಅವಲಂಬಿತವಾಗಿದೆ. ಕೈಗಾರಿಕೆಗಳಿಗೆ ಬೇಕಾದ ಕಚ್ಚಾ ವಸ್ತುಗಳನ್ನು ಒದಗಿಸುವುದು ಸೇರಿ ಗ್ರಾಮೀಣ ಭಾಗದ ಆರ್ಥಿಕತೆ ಜೀವಂತವಾಗಿಡುವಲ್ಲಿ ಒಕ್ಕಲುತನದ ಪಾತ್ರ ದೊಡ್ಡದಿದೆ. ಒಕ್ಕಲುತನ ಉಳಿದರೆ ಮಾತ್ರ ಉತ್ತಮ ಬದುಕು ನಡೆಸಲು ಸಾಧ್ಯ. ಮಣ್ಣು, ಹೊನ್ನು ತಿಂದು ಬದುಕಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ ಬಾದರ್ಲಿ ಮಾತನಾಡಿ, ಹಬ್ಬಗಳು, ಸಂಪ್ರದಾಯಗಳು ಮತ್ತು ಜನಪದ ಸಾಹಿತ್ಯ ಮಣ್ಣು ಮತ್ತು ಕೃಷಿ ಕಾಯಕದ ಸುತ್ತಲೂ ಹೆಣೆದುಕೊಂಡಿವೆ. ಕೃಷಿ ಉಳಿದರೆ ನಮ್ಮ ಸಂಸ್ಕೃತಿ ಉಳಿಯಲಿದೆ ಎಂದರು.
ಟ್ರಸ್ಟ್ ಅಧ್ಯಕ್ಷ ಚನ್ನನಗೌಡ ಮೇಟಿ, ಜಿಪಂ ಮಾಜಿ ಸದಸ್ಯ ಎನ್.ಶಿವನಗೌಡ ಗೊರೇಬಾಳ, ನಗರ ಕಾಂಗ್ರೆಸ್ ಅಧ್ಯಕ್ಷ ಖಾಜಿ ಮಲ್ಲಿಕ್ ವಕೀಲ, ಟಿಎಪಿಸಿಎಂಎಸ್ ಅಧ್ಯಕ್ಷ ಶರಣಪ್ಪ ರಡ್ಡೇರ್, ಎಪಿಎಂಸಿ ಕಾರ್ಯದರ್ಶಿ ರವಿಚಂದ್ರ, ಪುರಸಭೆ ಮಾಜಿ ಅಧ್ಯಕ್ಷ ಕೆ.ಮರಿಯಪ್ಪ, ಪ್ರಮುಖರಾದ ವೀರನಗೌಡ ಬಾದರ್ಲಿ, ವೆಂಕಟರಾವ ಬಾದರ್ಲಿ, ವೀರೇಶ ಯಡಿಯೂರಮಠ ಇತರರಿದ್ದರು.