ಬಸನಗೌಡ 
ರಾಯಚೂರು

ಕೆಬಿಜೆಎನ್‌ಎಲ್ ಇಇ ಬಸನಗೌಡ ಮೇಲೆ ಲೋಕಾ ದಾಳಿ

ರಾಚಯ್ಯ ಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • 40 ಕ್ಕೂ ಹೆಚ್ಚು ಅಧಿಕಾರಿಗಳಿಂದ 7 ಕಡೆಗಳಲ್ಲಿ ದಾಳಿ
ರಾಯಚೂರು
ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದನೆ ಆರೋಪ ಹಿನ್ನನೆ ಲೋಕಾಯುಕ್ತ ಅಧಿಕಾರಿಗಳು 7 ತಂಡಗಳಾಗಿ ಕೃಷ್ಣಭಾಗ್ಯ ಜಲ ನಿಗಮ ನಿಯಮಿತದ ಕಾರ್ಯನಿರ್ವಾಹಕ ಇಂಜಿನಿಯರ್ ಬಸನಗೌಡಗೆ ಸೇರಿದ ಒಟ್ಟು 7 ಕಡೆ ಬುಧವಾರ ಬೆಳ್ಳಂಬೆಳಗ್ಗೆ ದಾಳಿ ಮಾಡಿ ಕಡತಗಳನ್ನು ಪರಿಶೀಲನೆ ಮಾಡಿದರು.

ನಗರದ ಎಚ್‌ಆರ್‌ಬಿ ಲೇಔಟ್ ,ಯಕ್ಲಾಸಪೂರ, ಚಿಕ್ಕಹೊನ್ನಕುಣಿಯ ಕಚೇರಿಯಲ್ಲಿ ಅಧಿಕಾರಿಗಳು ಪರಿಶೀಲನೆ ಮಾಡಿದ್ದು, ಜತೆಗೆ ಇಇ ಬಸನಗೌಡ ಅವರಿಗೆ ಸೇರಿದ ಮೂರು ಮನೆ ,ಕಚೇರಿ, ಫಾರ್ಮ್ ಹೌಸ್, ಗೋದಾಮು, ಪೆಟ್ರೋಲ್ ಬಂಕ್, ಬಾರ್ ಅಂಡ್ ರೆಸ್ಟೋರೆಂಟ್ ಮೇಲೆ ದಾಳಿ ಮಾಡಿದ್ದಾರೆ. ಪರಿಶೀಲನೆ ವೇಳೆ ದೇವದುರ್ಗದ ಜಾಲಹಳ್ಳಿ ಬಳಿ ಕೃಷ್ಣಾ ನದಿ ದಂಡೆಯಲ್ಲಿ 30 ಎಕರೆ ಜಮೀನು ಖರೀದಿ ಮಾಡಿರುವುದು, ಜಿಲ್ಲಾಧಿಕಾರಿ ಕಚೇರಿ ಬಳಿ 8 ಎಕರೆ ಲೇಔಟ್ ದಾಖಲೆ ದೊರೆತ್ತಿದ್ದು, ಜತೆಗೆ ಪತ್ನಿ, ಸಹೋದರರ ಹೆಸರಿನಲ್ಲಿರುವ ಆಸ್ತಿಗಳು ಸೇರಿದಂತೆ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದು ಪರಿಶೀಲನೆ ಮುಂದುವರೆಸಿದ್ದಾರೆ.

ಲೋಕಾಯುಕ್ತ ಎಸ್ಪಿ ಸಿದ್ದರಾಜು ನೇತೃತ್ವದಲ್ಲಿ ಬಳ್ಳಾರಿ, ಹೊಸಪೇಟೆ, ಕೊಪ್ಪಳ, ರಾಯಚೂರು ಜಿಲ್ಲೆಯ 40 ಕ್ಕೂ ಹೆಚ್ಚು ಅಧಿಕಾರಿಗಳ ತಂಡಗಳಿಂದ ಪರಿಶೀಲನೆ ನಡೆಸಿದರು.