ಸಿಂಧನೂರು ತಾಲೂಕಿನ ಯದ್ದಲದೊಡ್ಡಿಯ ಸುವರ್ಣಗಿರಿ ವಿರಕ್ತಮಠದಲ್ಲಿ 5 ದಿನಗಳ ಪುರಾಣ ಪ್ರವಚನ ಪ್ರಾರಂಭೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಒಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಡಾ.ಸಿದ್ದಲಿಂಗಸ್ವಾಮೀಜಿ, ಯದ್ದಲದೊಡ್ಡಿ ಮಹಾಲಿಂಗಸ್ವಾಮೀಜಿ, ಬಳಗಾನೂರು ಸಿದ್ದಬಸವಸ್ವಾಮೀಜಿ, ಅಡವಿ ಅಮರೇಶ್ವರದ ತೋಂಟದಾರ್ಯಸ್ವಾಮೀಜಿ, ವೀರನಗೌಡ ಬಾದರ್ಲಿ ಇದ್ದರು. 
ರಾಯಚೂರು

ಪ್ರವಚನ ಕೇಳುವುದರಿಂದ ಮನಸ್ಸು ಶುದ್ಧ

ಪ್ರಮುಖ ಮುಖ್ಯಾಂಶಗಳು

  • ಮನಸ್ಸು ಶುದ್ಧ

ಪ್ರವಚನ ಕೇಳುವುದರಿಂದ ಮನಸ್ಸು ಶುದ್ಧ

ಸಿಂಧನೂರು: ಪುರಾಣ ಪ್ರವಚನಗಳನ್ನು ಆಲಿಸುವುದರಿಂದ ಮನಸ್ಸು ಶುದ್ಧವಾಗುತ್ತದೆ ಎಂದು ಒಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಡಾ.ಸಿದ್ದಲಿಂಗಸ್ವಾಮೀಜಿ ಹೇಳಿದರು.
ತಾಲೂಕಿನ ಯದ್ದಲದೊಡ್ಡಿ ಗ್ರಾಮದ ಸುವರ್ಣಗಿರಿ ವಿರಕ್ತಮಠದಲ್ಲಿ ಲಿಂ.ಸಿದ್ದಲಿಂಗ ಶಿವಯೋಗಿಗಳ ಜಾತ್ರೋತ್ಸವದ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು. ಮನುಷ್ಯನಿಗೆ ಸಂಸಾರ ತಾಪತ್ರಯ ಎನಿಸಿದಾಗ ಸಹಜವಾಗಿ ಬೇಸರ ಮೂಡುತ್ತದೆ. ಪುರಾಣ ಕೇಳುವುದರಿಂದ ಬೇಸರ ದೂರವಾಗಿ ಶಾಂತಿ, ಸಹನೆ, ತಾಳ್ಮೆ ಹೆಚ್ಚಾಗುತ್ತದೆ ಎಂದರು.
ಯದ್ದಲದೊಡ್ಡಿ ಸುವರ್ಣಗಿರಿ ವಿರಕ್ತಮಠದ ಮಹಾಲಿಂಗಸ್ವಾಮೀಜಿ ಮಾತನಾಡಿ, ಈ ಭಾಗ ಲಿಂ.ಚನ್ನಬಸವ ಶಿವಯೋಗಿಗಳು ಹಾಗೂ ಲಿಂ.ಸಿದ್ದಲಿಂಗ ಶಿವಯೋಗಿಗಳು ಓಡಾಡಿದ ಪುಣ್ಯ ನೆಲವಾಗಿದೆ. ಅವರ ಮಾರ್ಗದಲ್ಲಿಯೇ ಎಲ್ಲರೂ ಮುನ್ನೆಡೆದು ಜನರ ಬದುಕು ಹಸನಾಗಬೇಕೆಂಬ ಮಹಾದಾಸೆ ಹೊಂದಿದ್ದೇವೆ. ಜಾತ್ರೆಯಿಂದ ಬದುಕಿನ ಉತ್ಸಾಹ ಹೆಚ್ಚಾಗುತ್ತದೆ ಎಂದರು.
ಬಳಗಾನೂರು ಸಿದ್ದಬಸವಸ್ವಾಮೀಜಿ, ಅಡವಿ ಅಮರೇಶ್ವರದ ತೋಂಟದಾರ್ಯಸ್ವಾಮೀಜಿ, ಪ್ರಮುಖರಾದ ವೀರನಗೌಡ ಬಾದರ್ಲಿ, ವೀರನಗೌಡ ಮಾ.ಪಾ. ಆಯನೂರು, ಆರ್.ರಾಮನಗೌಡ, ಬಸವಲಿಂಗಪ್ಪ ಬಾದರ್ಲಿ ಇತರರಿದ್ದರು.