ಸಿಂಧನೂರಿನಲ್ಲಿ ರಾಗ್ ಸಿಂಧು ಮ್ಯೂಸಿಕ್ ಅಕಾಡೆಮಿಯಿಂದ ಭಕ್ತಿ ಸುಧೆ ಸಂಗೀತ ಕಾರ್ಯಕ್ರಮ ನಡೆಯಿತು.
- ತಾಲೂಕು ಸಂಸ್ಕಾರ ಭಾರತಿ ಅಧ್ಯಕ್ಷ ವೆಂಕಣ್ಣ ಜೋಶಿ
- ಸಿಂಧನೂರು ಭಕ್ತಿ ಸುಧೆ ಸಂಗೀತ ಕಾರ್ಯಕ್ರಮ
ಸಿಂಧನೂರು: ಸಂಗೀತ ಕೇಳುವುದರಿಂದ ಮಾನಸಿಕ ನೆಮ್ಮದಿ ಜತೆಗೆ ಬದುಕು ಉಲ್ಲಾಸಭರಿತವಾಗಿರುತ್ತದೆ ಎಂದು ತಾಲೂಕು ಸಂಸ್ಕಾರ ಭಾರತಿ ಅಧ್ಯಕ್ಷ ವೆಂಕಣ್ಣ ಜೋಶಿ ಹೇಳಿದರು.
ನಗರದ ಎಪಿಎಂಸಿ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ರಾಗ್ ಸಿಂಧು ಮ್ಯೂಸಿಕ್ ಅಕಾಡೆಮಿಯಿಂದ ಆಯೋಜಿಸಿದ್ದ ಭಕ್ತಿ ಸುಧೆ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಮ್ಮ ದೇಶದ ಪರಂಪರೆ, ಸಂಸ್ಕೃತಿಯ ಕುರುಹಾದ ಸಂಗೀತವನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ. ಜತೆಗೆ ಮಕ್ಕಳಲ್ಲಿ ಸಂಗೀತ, ಸಂಸ್ಕಾರ ಬೆಳೆಸಬೇಕು ಎಂದರು.
ಸಿಂಧನೂರಿನ ಸಂಗೀತಗಾರ ವಿಜಯಕುಮಾರ ಜಿ. ಹಿರೇಮಠ ಅವರು ರಾಗ್ ಸಿಂಧು ಮ್ಯೂಸಿಕ್ ಅಕಾಡೆಮಿ ಪ್ರಾರಂಭಿಸಿ ಸಂಗೀತ ತರಗತಿ ನಡೆಸುವ ಮೂಲಕ ಬಾಲ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರು.
ಬಾಲಪ್ರತಿಭೆಗಳಾದ ಸ್ವರ, ಅನಿರುದ್ಧ, ರಿತಿಕಾ, ಸಾನ್ವಿ, ನಿಸರ್ಗ ಹಾಡುಗಳನ್ನು ಹಾಡಿ ನೆರೆದಿದ್ದ ಪ್ರೇಕ್ಷಕರ ಮನಸೂರೆಗೊಳಿಸಿದರು. ಸಂಗೀತಗಾರ ವಿಜಯಕುಮಾರ ಹಿರೇಮಠಗೆ ವಿರಾಟ್ ಬದಿ ಕೊಳಲು, ಮಹಾಂತಯ್ಯ ಗೋನವಾರ ಹಾರ್ಮೋನಿಯಂ, ಗಣಪತಿ ಪೂಜಾರ್ ದಿನ್ನಿ ತಬಲಾ ಸಾಥ್ ನೀಡಿದರು. ಪ್ರಮುಖರಾದ ಗವಿಸಿದ್ದಯ್ಯ ಹಿರೇಮಠ, ಅಮರಯ್ಯಸ್ವಾಮಿ, ವಿನಾಯಕ ದೇವಸ್ಥಾನದ ಅರ್ಚಕ ಶರಣಯ್ಯಸ್ವಾಮಿ ಇದ್ದರು.