ಮಸ್ಕಿ: ಇಲ್ಲಿನ ಎನ್‌ಎಂಜಿ ಫಂಕ್ಷನ್‌ಹಾಲ್‌ನಲ್ಲಿ ಫೆ.28ರಂದು ರಾಯಚೂರು, ಕೊಪ್ಪಳ, ವಿಜಯನಗರ, ಬಳ್ಳಾರಿ ಜಿಲ್ಲೆಗಳ ಲಯನ್ಸ್ ಕ್ಲಬ್ ಪ್ರಾದೇಶಿಕ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಕ್ಲಬ್‌ನ ರೀಜನಲ್ ಚೇರ್‌ಪರ್ಸನ್ ಡಾ.ಮಲ್ಲಿಕಾರ್ಜುನ ಇತ್ಲಿ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಅತಿಥಿಗಳಾಗಿ ಲಯನ್ ಎನ್.ಮೋಹನ್ ಕುಮಾರ ಮತ್ತು ಲಯನ್ ಜಿ.ಶ್ರೀನಿವಾಸ ಭಾಗವಹಿಸಲಿದ್ದಾರೆ ಎಂದರು.
ಮಸ್ಕಿ ಲಯನ್ಸ್ ಕ್ಲಬ್ ಕಳೆದ 48 ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ಸಕ್ರಿಯವಾಗಿದೆ. ಮೂರನೇ ಸಲ ರೀಜನಲ್ ಮೀಟ್ ಮಸ್ಕಿಯಲ್ಲಿ ನಡೆಯುತ್ತಿದೆ. ಈವರೆಗೆ ಅಂದಾಜು 20 ಸಾವಿರ ಜನರಿಗೆ ಕಣ್ಣಿನ ತಪಾಸಣೆ, ಶಸ್ತ್ರಚಿಕಿತ್ಸೆ ಹಾಗೂ ಸಸಿ ನೆಡುವ ಕಾರ್ಯಕ್ರಮ, ಆರೋಗ್ಯ ತಪಾಸಣೆ ಶಿಬಿರಗಳನ್ನು ಹಮ್ಮಿಕೊಂಡಿದ್ದಲ್ಲದೆ, ಕನ್ನಡ ಪ್ರಾಥಮಿಕ ಶಾಲೆ ನಡೆಸುತ್ತಿದ್ದೇವೆ. ಸಭೆಯಲ್ಲಿ ವಾರ್ಷಿಕ ವರದಿ ಮಂಡನೆ, ಲಯನ್ಸ್ ಕ್ಲಬ್ ಸಾಧಕರಿಗೆ ಸನ್ಮಾನ ಮಾಡಲಾಗುವುದು ಎಂದು ತಿಳಿಸಿದರು.
ಪ್ರಮುಖರಾದ ಶಿವರಾಜ ಇತ್ಲಿ, ಬಸವಲಿಂಗಪ್ಪ ಶೆಟ್ಟಿ ಇದ್ದರು.