ಮುದಗಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಂತಿಮ ವರ್ಷದ ವಿದ್ಯಾರ್ಥಿಗಳ ಬಿಳ್ಕೋಡುಗೆ ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರೌಢಶಾಲಾ ಸಹಶಿಕ್ಷಕರ ಸಂಘದ ತಾಲೂಕಾದ್ಯಕ್ಷ ಬಸವರಾಜ ಹಂದ್ರಾಳ ಮಾತನಾಡಿದರು. ಪ್ರಾಚಾರ್ಯ ಡಾ.ಸಿದ್ದರಾಮ ಪಾಟೀಲ್, ಸಹಪ್ರಾಧ್ಯಾಪಕ ದೊಡ್ಡಬಸಪ್ಪ ಹುಡೇದಗಡ್ಡಿ, ಎಂ.ಡಿ.ಚಿತ್ತರಗಿ ಇತರರಿದ್ದರು. 
ರಾಯಚೂರು

ಗುರು ಮಾರ್ಗದರ್ಶನದಿಂದ ಜೀವನ ಸಾಕಾರ

ಗುರು ಮಾರ್ಗದರ್ಶನದಿಂದ ಜೀವನ ಸಾಕಾರ Life is fulfilled through the guidance of a Guru
ಮುದಗಲ್: ವಿದ್ಯಾರ್ಥಿಗಳ ಮುಂದೆ ಗುರಿ ಹಿಂದೆ ಗುರುವಿನ ಮಾರ್ಗದರ್ಶನವಿದ್ದರೆ ಉತ್ತಮ ಜೀವನ ಸಾಕಾರಗೊಳಿಸಿಕೊಳ್ಳಬಹುದು ಎಂದು ಸರ್ಕಾರಿ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಲಿಂಗಸುಗೂರು ತಾಲೂಕಾಧ್ಯಕ್ಷ ಬಸವರಾಜ ಹಂದ್ರಾಳ ಹೇಳಿದರು. 
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎ, ಬಿಕಾಂ, ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಗುರುವಾರ ಮಾತನಾಡಿದರು. ವಿದ್ಯಾರ್ಥಿಗಳು ವಿನಯ, ಸರಳತೆ ಮತ್ತು ಕಠಿಣ ಪರಿಶ್ರಮ ಅಳವಡಿಸಿಕೊಳ್ಳಬೇಕು. ಗುರುವಿನ ಮಾರ್ಗದರ್ಶನ ಚಾಚೂ ತಪ್ಪದೆ ಪಾಲಿಸಬೇಕು. ಉನ್ನತ ಜ್ಞಾನ ಪಡೆಯಬೇಕು. 
ನೈತಿಕ ಮೌಲ್ಯಗಳ ಜತೆಗೆ ಆರೋಗ್ಯಕರವಾದ ಶಿಕ್ಷಣ ಪಡೆದು ಬದುಕನ್ನು ರೂಪಿಸಿಕೊಳ್ಳಬೇಕು. ಸ್ವ ಉದ್ಯೋಗ ಮೂಲಕ ಸ್ವಾವಲಂಬಿ ಜೀವನ ನಡೆಸಬೇಕು ಎಂದು ತಿಳಿಸಿದರು. ಸಹಪ್ರಾಧ್ಯಾಪಕ ದೊಡ್ಡಬಸಪ್ಪ ಹುಡೇದಗಡ್ಡಿ, ಎಂ.ಡಿ.ಚಿತ್ತರಗಿ ಮಾತನಾಡಿದರು. 
ಪ್ರಾಚಾರ್ಯ ಡಾ.ಸಿದ್ದರಾಮ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಉದಯಕುಮಾರ ಕಮ್ಮಾರ, ನಾಗರಾಜ ತಳವಾರ, ಮಲ್ಲಪ್ಪ ಮಾಟೂರು, ಕರಿಯಪ್ಪ ಯಾದವ್, ಸಂಜೀವ್ ಬಾಕಲಿ ಇತರರಿದ್ದರು.