ಮಸ್ಕಿಯಲ್ಲಿ ಶಿಕ್ಷಕ ಆದಪ್ಪ ಹೆಂಬಾ ರಚಿಸಿದ ‘ಮಾಸಂಗಿಪುರವಾಸಿ ಮುದ್ದು ಮಲ್ಲಯ್ಯ’ ಕೃತಿ ಬಿಡುಗಡೆ ಮಾಡಲಾಯಿತು. 
ರಾಯಚೂರು

ಶೂನ್ಯಭಾವದತ್ತ ಸಾಗುವುದೇ ಜೀವನ

ಮಸ್ಕಿ: ಶಿಕ್ಷಕ ಆದಪ್ಪ ಹೆಂಬಾ ಅವರ ರಚಿಸಿದ ‘ಮಾಸಂಗಿಪುರವಾಸಿ ಮುದ್ದು ಮಲ್ಲಯ್ಯ’ ಕೃತಿ ಬಿಡುಗಡೆ ಪಟ್ಟಣದಲ್ಲಿ ಮುದ್ದುಮಲ್ಲಯ್ಯ ದೇವಸ್ಥಾನದ ಸಭಾ ಭವನದಲ್ಲಿ ಸೋಮವಾರ ನಡೆಯಿತು.
ಸಾನ್ನಿಧ್ಯ ವಹಿಸಿದ್ದ ಕನಕಗಿರಿಮೆದಿಕಿನಾಳ ಮಠದ ಶ್ರೀ ಚನ್ನಮಲ್ಲ ಸ್ವಾಮೀಜಿ ಆಶೀರ್ವಚನ ನೀಡಿ, ಬದುಕನ್ನು ಪ್ರೀತಿಸುತ್ತಲೇ ಈಶ್ವರನೆಡೆಗೆ ಪ್ರೇಮ ಬೆಳೆಸಿಕೊಳ್ಳಬೇಕು. ಅದುವೇ ಶೂನ್ಯ ಸಂಪಾದನೆಯ ರಹದಾರಿ. ಮನುಷ್ಯ ಆಸೆ-ಆಕಾಂಕ್ಷೆಗಳನ್ನು ಮೀರಿ ಶೂನ್ಯಭಾವದತ್ತ ಸಾಗಬೇಕು. ಶೂನ್ಯ ಸಂಪಾದನೆಯ ಮೂಲಕ ಭಗವಂತನಲ್ಲಿ ಲೀನವಾಗುವ ಬದುಕು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಪತ್ರಕರ್ತ ವೀರೇಶ ಸೌದ್ರಿ ಮಾತನಾಡಿ, ಮುದ್ದು ಮಲ್ಲಯ್ಯ ಕೃತಿ ಸಮಾಜ, ಬದುಕು ಹಾಗೂ ಮೌಲ್ಯಗಳನ್ನು ಕಟ್ಟಿಕೊಡುವ ಪ್ರಯತ್ನವಾಗಿದೆ ಎಂದರು. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಕೃತಿ ಬಿಡುಗಡೆ ಮಾಡಿದರು. ಶ್ರೀವರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಪುರಸಭೆ ಅಧ್ಯಕ್ಷ ಸುರೇಶ ಹರಸೂರು, ಡಾ.ಶಿವಶರಣಪ್ಪ ಇತ್ಲಿ, ಡಾ.ಬಿ.ಎಚ್.ದಿವಟರ್, ಸಾಹಿತಿ ಮಹಾಂತೇಶ ಮಸ್ಕಿ, ಬಿ.ಎಲ್.ಶೆಟ್ಟಿ ಇದ್ದರು.