ಮಾನ್ವಿ ತಹಸಿಲ್ ಕಚೇರಿಯಲ್ಲಿ ರೇಣುಕಾಚಾರ್ಯರ ಜಯಂತಿ ಆಚರಿಸಲಾಯಿತು. ತಹಸೀಲ್ದಾರ್ ಭೀಮರಾಯ ರಾಮಸಮುದ್ರ, ಅಖಿಲ ಭಾರತ ಬೇಡಜಂಗಮ ಸಮಾಜದ ವಿಭಾಗೀಯ ಸಂಚಾಲಕ ಕಿಡಿಗಣ್ಣಯ್ಯ ಸ್ವಾಮಿ ಉಮಳಿಹೊಸೂರು, ವೀರಶೈವ ಲಿಂಗಾಯತ ಸಮಾಜದ ತಾಲೂಕು ಅಧ್ಯಕ್ಷ ಹರಿಹರಪಾಟೀಲ್, ಮಹಾಸಭಾದ ತಾಲೂಕು ಅಧ್ಯಕ್ಷ ಅರುಣಕುಮಾರ ಚಂದ, ಪ್ರಮುಖರಾದ ಮಲ್ಲನಗೌಡ ನಕ್ಕುಂದಿ, ಶಿವಲಿಂಗಯ್ಯಸ್ವಾಮಿ, ಗುರುರಾಜ ನಾಗಲಾಪುರ ಇತರರಿದ್ದರು. 
ರಾಯಚೂರು

ರೇಣುಕಾಚಾರ್ಯರ ಸಂದೇಶಗಳನ್ನು ಪಾಲಿಸೋಣ

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ಭೀಮರಾಯ ಬಿ.ರಾಮಸಮುದ್ರ ಕರೆ
  • ಮಾನ್ವಿ ರೇಣುಕಾಚಾರ್ಯರ ಜಯಂತಿ ಆಚರಣೆ
ಮಾನ್ವಿ: ಜಗದ್ಗುರು ರೇಣುಕಾಚಾರ್ಯರು ಸಮಾಜಕ್ಕೆ ಉತ್ತಮ ಸಂದೇಶ-ತತ್ವಗಳನ್ನು ಸಾರಿದ್ದು ಎಲ್ಲರೂ ಅವರ ಆದರ್ಶಗಳನ್ನು ಪಾಲಿಸಬೇಕು ಎಂದು ತಹಸೀಲ್ದಾರ್ ಭೀಮರಾಯ ಬಿ.ರಾಮಸಮುದ್ರ ಹೇಳಿದರು.
ಪಟ್ಟಣದ ತಹಸಿಲ್ ಕಚೇರಿಯಲ್ಲಿ ತಾಲೂಕು ಅಡಳಿತದಿಂದ ಆಯೋಜಿಸಿದ್ದ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಂದಿನ ಪೀಳಿಗೆಗೆ ಶ್ರೀ ರೇಣುಕಾಚಾರ್ಯರು ಸೇರಿದಂತೆ ಮಹನೀಯರ, ನಾಡಿನ ಪರಂಪರೆ, ಆಚರಣೆಗಳ ಬಗ್ಗೆ ತಿಳಿಸಬೇಕಿದೆ. ದಾರಿ ತಪ್ಪದಂತೆ ಸನ್ಮಾರ್ಗದಲ್ಲಿ ನಡೆಯುವಂತೆ ನೋಡಿಕೊಳ್ಳಬೇಕಿದೆ ಮತ್ತು ಸರ್ಕಾರವು ಸಮಾಜಗಳನ್ನು ಒಗ್ಗೂಡಿಸಿ ಮುಂದೆ ಸಾಗುವಂತೆ ಮಾಡುವ ಉದ್ದೇಶದಿಂದ ಮಹನೀಯರ ಜಯಂತಿಗಳನ್ನು ಆಚರಿಸಲು ಸೂಚಿಸಿದ್ದು, ಅಂತಹ ವಹನೀಯರು ನಮ್ಮ ಜೀವನಕ್ಕೆ ಆದರ್ಶವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ವೀರಶೈವ ಸಮಾಜದ ಸಾಧಕರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಶ್ರೀಧರಸ್ವಾಮಿ, ವೀರಭದ್ರಯ್ಯ ಸ್ವಾಮಿ, ಸಿದ್ರಾಮಯ್ಯ ಸ್ವಾಮಿ, ಶಿವಶಂಕರಯ್ಯ ಸ್ವಾಮಿ, ಸಂಗಯ್ಯ ಸ್ವಾಮಿ ಕಲ್ಮಠ, ಜಗದೀಶ ಒತ್ತೂರು, ಶಿವಯ್ಯ ಸ್ವಾಮಿ, ಗುಮ್ಮ ಬಸವರಾಜ, ಶಿವಲಿಂಗಯ್ಯ ಸ್ವಾಮಿ, ಚನ್ನಬಸಯ್ಯ ಸ್ವಾಮಿ ಇತರರಿದ್ದರು.