ಎಪಿಎಂಸಿ ಮಾಜಿ ಸದಸ್ಯ ಶಿವರಾಜ ನಾಯಕ ವಕೀಲ, ಜಿ.ನರಸಿಂಹ ನಾಯಕ, ಆಂಜನೇಯ ನಾಯಕ, ದೇವರಾಜ ಚಿಕ್ಕಕೊಟ್ನೆಕಲ್  
ರಾಯಚೂರು

ಯುವ ಪೀಳಿಗೆಗೆ ಇತಿಹಾಸ ತಿಳಿಸುವ ಕೆಲಸವಾಗಲಿ

ಮಾನ್ವಿ: ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧವಾದ ಸಾಮ್ರಾಜ್ಯಗಳಲ್ಲಿ ವಿಜಯನಗರ ಸಾಮ್ರಾಜ್ಯ ಪ್ರಥಮವಾಗಿದೆ. ಹಕ್ಕಬುಕ್ಕರು 1336ರ ಏ.18ರಂದು ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದರೆನ್ನುವುದು ಇತಿಹಾಸದಿಂದ ತಿಳಿದುಬರುತ್ತದೆ ಎಂದು ಎಪಿಎಂಸಿ ಮಾಜಿ ಸದಸ್ಯ ಶಿವರಾಜ ನಾಯಕ ವಕೀಲ ಹೇಳಿದರು.
ಪಟ್ಟಣದ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಶನಿವಾರ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಹಾಗೂ ರಾಜ್ಯ ಬೇಡರ ಸಮಿತಿ ಸಂಯುಕ್ತಾಶ್ರಯದಲ್ಲಿ ವಿಜಯನಗರ ಸಾಮ್ರಾಜ್ಯದ ಪ್ರತಿಷ್ಠಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. 
ಇಂತಹ ನಾಡಿನ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಅಗತ್ಯವಿದೆ ಎಂದರು.
ಪುರಸಭೆ ನಾಮನಿರ್ದೇಶನ ಸದಸ್ಯ ಹಂಪಯ್ಯ ನಾಯಕ, ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕು ಅಧ್ಯಕ್ಷ ದೇವು ನಾಯಕ, ಕೊಂಡಯ್ಯನಾಯಕ, ನಾಯ್ಡುನಾಯಕ, ರಾಜ್ಯ ಬೇಡರ ಪಡೆ ಅಧ್ಯಕ್ಷ ಅಂಬಣ್ಣ ನಾಯಕ, ಸಿದ್ರಾಮಪ್ಪ ಸಾಹುಕಾರ, ಮೌನೇಶ ನಾಯಕ, ಜೆಲ್ಲಿ ಆಂಜನೇಯ ನಾಯಕ ನೀರಮಾನ್ವಿ, ಅಮರೇಶ ನಾಯಕ ಜಾನೇಕಲ್, ದೇವರಾಜ್ ನಾಯಕ, ಚಿದಾನಂದ ನಾಯಕ ಇತರರಿದ್ದರು.