ಲಿಂಗಸುಗೂರಿನಲ್ಲಿ ಟಿಎಚ್‌ಒ ಹನುಮಂತರಾಯ ತಳ್ಳಳ್ಳಿಗೆ ಕರವೇ ಕಾರ್ಯಕರ್ತರು ಮನವಿ ಸಲ್ಲಿಸಿದರು.ತಾಲೂಕು ಅಧ್ಯಕ್ಷ ಆಂಜನೇಯ ಭಂಡಾರಿ, ಉಪಾಧ್ಯಕ್ಷ ಭೀಮೇಶ ನಾಯಕ, ಶಿವು ಪತ್ತಾರ, ಮೌನೇಶ ಬುಳ್ಳಾಪುರ, ಸಲೀಂಖಾನ್ ಇತರರಿದ್ದರು. 
ರಾಯಚೂರು

ನಕಲಿ ವೈದ್ಯರ ಹಾವಳಿಗೆ ಕಡಿವಾಣ ಬೀಳಲಿ

ಲಿಂಗಸುಗೂರು : ತಾಲೂಕಿನಲ್ಲಿ ನಕಲಿ ವೈದ್ಯರ ಹಾವಳಿ ಮಿತಿಮೀರಿದ್ದು, ಕಡಿವಾಣ ಹಾಕಬೇಕೆಂದು ಒತ್ತಾಯಿಸಿ ಕರವೇ (ಪ್ರವೀಣ ಶೆಟ್ಟಿ ಬಣ) ಕಾರ್ಯಕರ್ತರು ಸೋಮವಾರ ಟಿಎಚ್‌ಒ ಹನುಮಂತರಾಯ ತಳ್ಳಳ್ಳಿಗೆ ಮನವಿ ಸಲ್ಲಿಸಿದರು. 
ಎಸ್ಸೆಸ್ಸೆಲ್ಸಿ, ಪಿಯುಸಿ, ಸರ್ನಿಂಗ್ ಕೋರ್ಸ್ ಓದಿದವರು ಯಾವುದೇ ಎಂಬಿಬಿಎಸ್, ಬಿಎಎಂಎಸ್ ಪದವಿ ಪಡೆಯದೆ ಅನಧಿಕೃತವಾಗಿ ಚಿಕಿತ್ಸೆ ನೀಡುತ್ತಿರುವುದರಿಂದ ಅಮಾಯಕರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ.
ತಾಲೂಕಿನ ಸುತ್ತಲಿನ ಹಳ್ಳಿಗಳಲ್ಲಿ ಕ್ಲಿನಿಕ್ ಆರಂಭಿಸಿದ್ದಾರೆ. ಇಂಥವರನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. 
ಕರವೇ ತಾಲೂಕು ಅಧ್ಯಕ್ಷ ಆಂಜನೇಯ ಭಂಡಾರಿ, ಉಪಾಧ್ಯಕ್ಷ ಭೀಮೇಶ ನಾಯಕ, ಶಿವು ಪತ್ತಾರ, ಮೌನೇಶ ಬುಳ್ಳಾಪುರ, ಸಲೀಂಖಾನ್, ಕುರುಮೇಶ ನಾಯಕ, ಶಾರುಜೋಗೇರ ಇತರರಿದ್ದರು.