ಲಿಂಗಸುಗೂರು ಅಬಕಾರಿ ಎಸ್‌ಐ ಬಸವರಾಜಗೆ ಮಾಚನೂರು ಗ್ರಾಮಸ್ಥರು ಮನವಿ ಸಲ್ಲಿಸಿದರು. ಗ್ರಾಪಂ ಮಾಜಿ ಸದಸ್ಯ ನಂದಪ್ಪ, ಕ್ಯಾತನಗೌಡ, ಪ್ರಮುಖರಾದ ರಾಜಾಸಾಬ್, ಶರಣಬಸವ, ಗುಂಡಪ್ಪ, ಶಿವಪುತ್ರಪ್ಪ ಇತರರಿದ್ದರು. 
ರಾಯಚೂರು

ಮದ್ಯ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಲಿ

ಪ್ರಮುಖ ಮುಖ್ಯಾಂಶಗಳು

  • ಎಸ್‌ಐ ಬಸವರಾಜಗೆ ಮನವಿ
  • ಗ್ರಾಮಸ್ಥರು ಒತ್ತಾಯ
ಲಿಂಗಸುಗೂರು: ಮಾಚನೂರು ಗ್ರಾಮದಲ್ಲಿ ಸಾರಾಯಿ ಅಕ್ರಮ ಮಾರಾಟ ಮಾಡುತ್ತಿರುವವರ ವಿರುದ್ಧ ಸೂಕ್ತ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬುಧವಾರ ಗ್ರಾಮಸ್ಥರು ಅಬಕಾರಿ ಇಲಾಖೆ ಎಸ್‌ಐ ಬಸವರಾಜಗೆ ಮನವಿ ಸಲ್ಲಿಸಿದರು.
ಗ್ರಾಮದಲ್ಲಿ ಸರಾಯಿ ಅಕ್ರಮ ಮಾರಾಟ ಮಾಡುತ್ತಿದ್ದು, ಕುಡುಕರ ಹಾವಳಿ ಹೆಚ್ಚಾಗಿದೆ. 18 ವರ್ಷದೊಳಗಿನ ಯುವಕರು ಕುಡಿತಕ್ಕೆ ಬಲಿಯಾಗುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ದೂರು ನೀಡಿದರೆ ಸಿಬ್ಬಂದಿ ಕೊರತೆ ಇದೆ ಮತ್ತೊಮ್ಮೆ ಹೀಗಾಗದಂತೆ ನೋಡಿಕೊಳ್ಳುವುದಾಗಿ ತಿಳಿಸುತ್ತಾರೆ. ದಂಡ ವಿಧಿಸಿ, ಕಠಿಣ ಕಾನೂನು ಕ್ರಮ ಕೈಗೊಂಡರೆ ಅಕ್ರಮ ಮಾರಾಟಕ್ಕೆ ಕಡಿವಾಣ ಬೀಳಲಿದೆ.
ಆದರೆ, ಯಾರಿಗೆ ಎಲ್ಲಿ ಹಣ ಕೊಡಬೇಕು ಗೊತ್ತಿದೆ ಎನ್ನುತ್ತಾ ಮಾರಾಟ ಮುಂದುರಿಸಿದ್ದಾರೆ. ಕರ್ತವ್ಯದಲ್ಲಿ ನಿರ್ಲಕ್ಷ ತೋರದೆ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗ್ರಾಪಂ ಮಾಜಿ ಸದಸ್ಯ ನಂದಪ್ಪ, ಪ್ರಮುಖರಾದ ಕ್ಯಾತನಗೌಡ, ರಾಜಾಸಾಬ್, ಶರಣಬಸವ, ಗುಂಡಪ್ಪ, ಶಿವಪುತ್ರಪ್ಪ, ಬಾಷಾಸಾಬ, ಬಸವರಾಜ ಹಣತಿ, ರಮೇಶ ಚಲುವಾದಿ, ಸಂತೋಷ ದಾಸರ, ಮಾಳಪ್ಪ ಕರಡಿ ಇತರರಿದ್ದರು.