ಮಸ್ಕಿ ತಾಲೂಕು ದಲಿತ ಸಂಘಟನೆಗಳ ಒಕ್ಕೂಟದಿಂದ ತಹಸೀಲ್ದಾರ್ ಮಂಜುನಾಥ ಬೋಗಾವತಿಗೆ ಮನವಿ ಸಲ್ಲಿಸಲಾಯಿತು. ಜಿಪಂ ಮಾಜಿ ಸದಸ್ಯ ದೊಡ್ಡಪ್ಪ ಮುರಾರಿ, ಸಾಹಿತಿ ಸಿ.ದಾನಪ್ಪ, ಪುರಸಭೆ ಸದಸ್ಯ ಮೌನೇಶ ಮುರಾರಿ, ಪ್ರಮುಖರಾದ ಅಶೋಕ ಮುರಾರಿ, ಮಲ್ಲಯ್ಯ ಮುರಾರಿ, ದುರ್ಗಾಪ್ರಸಾದ ತೋರಣದಿನ್ನಿ, ಕಿರಣ ಮುರಾರಿ, ಜಮದಗ್ನಿ ಗೋನಾಳ, ಮಲ್ಲಪ್ಪ ಗೋನಾಳ ಇತರರಿದ್ದರು.
ದೌರ್ಜನ್ಯ ಎಸಗುವವರಿಗೆ ಶಿಕ್ಷೆಯಾಗಲಿ
ಮಸ್ಕಿ: ದಲಿತರ ಮೇಲೆ ಅನಗತ್ಯ ದೌರ್ಜನ್ಯ ನಡೆಯುತ್ತಿದ್ದು, ಅಪರಾಧಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸುವಂತೆ ತಾಲೂಕು ದಲಿತ ಸಂಘಟನೆಗಳ ಒಕ್ಕೂಟದಿಂದ ಪಟ್ಟಣದಲ್ಲಿ ಬುಧವಾರ ತಹಸೀಲ್ದಾರ್ ಮಂಜುನಾಥ ಬೋಗಾವತಿ ಮೂಲಕ ಸಿಎಂ ಮತ್ತು ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.
ಹುಬ್ಬಳ್ಳಿಯಲ್ಲಿ ದಲಿತ ಯುವಕನನ್ನು ಮದುವೆಯಾದ ಕಾರಣಕ್ಕೆ 7 ತಿಂಗಳ ಗರ್ಭಿಣಿಯನ್ನು ಆಕೆಯ ತಂದೆಯೇ ಕೊಲೆ ಮಾಡಿದ್ದು, ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಅಲ್ಲದೆ ಡಿ.22ರಂದು ಹಟ್ಟಿ ಹತ್ತಿರದ ಪಾಮನಕಲ್ಲೂರು ಕ್ರಾಸ್ ಬಳಿ ಹೊಲದಲ್ಲಿ ಯುವತಿಯ ಮೃತ ದೇಹ ಅನುಮಾನಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಈ ಎರಡು ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಗಲ್ಲು ಶೀಕ್ಷೆ ವಿಧಿಸುವಂತೆ ಒತ್ತಾಯಿಸಿದರು.
ಜಿಪಂ ಮಾಜಿ ಸದಸ್ಯ ದೊಡ್ಡಪ್ಪ ಮುರಾರಿ, ಸಾಹಿತಿ ಸಿ.ದಾನಪ್ಪ, ಪುರಸಭೆ ಸದಸ್ಯ ಮೌನೇಶ ಮುರಾರಿ, ಪ್ರಮುಖರಾದ ಅಶೋಕ ಮುರಾರಿ, ಮಲ್ಲಯ್ಯ ಮುರಾರಿ, ದುರ್ಗಾಪ್ರಸಾದ ತೋರಣದಿನ್ನಿ, ಕಿರಣ ಮುರಾರಿ, ಜಮದಗ್ನಿ ಗೋನಾಳ, ಮಲ್ಲಪ್ಪ ಗೋನಾಳ, ಸುಭಾಷ ಹಿರೇಕಡಬೂರು, ಬಸವಂತ ಕಡಬೂರ, ಮರಿಸ್ವಾಮಿ ಮುದಬಾಳ, ಬಾಲಸ್ವಾಮಿ ಜಿನ್ನಾಪುರ, ಈರಪ್ಪ ಕುಣಿಕೆಲ್ಲೂರು ಇತರರಿದ್ದರು.