ದೇವದುರ್ಗದ ನ್ಯಾಯಾಲಯ ಆವರಣದಲ್ಲಿ ಆಯೋಜಿಸಿದ್ದ ವಿಶ್ವ ತಂಬಾಕು ನಿಷೇಧ ದಿನ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಸುರೇಶ ಅಪ್ಪಣ್ಣ ಸವದಿ ಉದ್ಘಾಟಿಸಿದರು. ಟಿಎಚ್‌ಒ ಬನದೇಶ್ವರ, ವಕೀಲರಾದ ಗಂಗಮ್ಮ, ಪ್ರತಿಭಾ, ಭೀಮಮ್ಮ, ಬಸವರಾಜ, ಡಾ.ತ್ಯಾಗರಾಜ, ಸೋಮಪ್ಪ, ಅರುಣ್ ಇದ್ದರು.
- ಹಿರಿಯ ಸಿವಿಲ್ ನ್ಯಾಯಾಧೀಶ ಸುರೇಶ ಅಪ್ಪಣ್ಣ ಸವದಿ ಸಲಹೆ
- ವಿಶ್ವ ತಂಬಾಕು ನಿಷೇಧ ದಿನ
ದೇವದುರ್ಗ: ಯುವಜನತೆ ಫ್ಯಾಷನ್ ಹೆಸರಿನಲ್ಲಿ ದುಶ್ಚಟಗಳಿಗೆ ದಾಸರಾಗುತ್ತಿದ್ದು, ಜಾಗೃತರಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಸುರೇಶ ಅಪ್ಪಣ್ಣ ಸವದಿ ಹೇಳಿದರು.
ಪಟ್ಟಣದ ನ್ಯಾಯಾಲಯ ಸಭಾಂಗಣದಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯಿಂದ ಶುಕ್ರವಾರ ಆಯೋಜಿಸಿದ್ದ ವಿಶ್ವ ತಂಬಾಕು ನಿಷೇಧ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ವಸ್ತುಗಳ ಮಾರಾಟಕ್ಕೆ ಸರ್ಕಾರ ನಿರ್ಬಂಧ ವಿಧಿಸಿದರೂ ಮಾರಾಟ ನಡೆಯುತ್ತಿರುವುದು ನೋವಿನ ಸಂಗತಿ. ತಂಬಾಕಿನಲ್ಲಿ 3-4ಸಾವಿರ ಅಪಾಯಕಾರಿ ರಾಸಾಯನಿಕಗಳಿವೆ. ಆದ್ದರಿಂದ ಯುವಕರು ತಂಬಾಕು ಸೇವಿಸಬಾರದು ಎಂದರು.
ಮನೋರೋಗ ತಜ್ಞ ಡಾ.ಮನೋಹರ್ ಪತ್ತಾರ ಮಾತನಾಡಿ, ತಂಬಾಕು ಸೇವನೆಯಿಂದ ಅಸ್ತಮಾ, ದಂತಕ್ಷಯ, ಕಣ್ಣಿನ ತೊಂದರೆ, ಬಾಯಿ, ಧ್ವನಿ ಪೆಟ್ಟಿಗೆ, ಅನ್ನನಾಳ, ಶ್ವಾಸಕೋಶ, ಜಠರ ಸೇರಿ ಇತರ ಕ್ಯಾನ್ಸರ್‌ಗಳು ಬರುತ್ತವೆ. ಮಹಿಳೆಯರಲ್ಲಿ ಗರ್ಭಪಾತ, ಗರ್ಭಕಂಠಕ ಕ್ಯಾನ್ಸರ್, ಕಡಿಮೆ ತೂಕದ ಮಗುವಿನ ಜನನ, ಶಿಶುಮರಣ ಸಂಭವಿಸುತ್ತವೆ. ಆದ್ದರಿಂದ ತಂಬಾಕು ತ್ಯಜಿಸಬೇಕು ಎಂದು ತಿಳಿಸಿದರು.
ಟಿಎಚ್‌ಒ ಬನದೇಶ್ವರ, ವಕೀಲರಾದ ಗಂಗಮ್ಮ, ಪ್ರತಿಭಾ, ಭೀಮಮ್ಮ, ಬಸವರಾಜ, ಡಾ.ತ್ಯಾಗರಾಜ, ಸೋಮಪ್ಪ, ಅರುಣ್ ಕುಮಾರ್, ಗೀತಮ್ಮ, ಓಂಕಾರ, ಚಂದ್ರಾಮಪ್ಪ, ಮನೋಜ್, ಸಂಗಮ್ಮ, ಅನ್ನಪೂರ್ಣಾ, ದೀಪಾ, ಗಂಗಮ್ಮ, ಆಶಾ ಕಾರ್ಯಕರ್ತೆಯರಾದ ದೀಪಿಕಾ, ನಾಗಮ್ಮ, ತಾಯಮ್ಮ, ಸುಜಾತಾ, ದೀಪಾ, ರೇಣುಕಾ ಇತರರಿದ್ದರು.