ಸಿಂಧನೂರಿನ ಮಿಲಾಪ ಶಾದಿಮಹಲ್‌ನಲ್ಲಿ ಬುಧವಾರ ಏರ್ಪಡಿಸಿದ್ದ ನಿವೃತ್ತ ಹಾಗೂ ಪಿಂಚಣಿ ನೌಕರರ ದಿನಾಚರಣೆ ಕಾರ್ಯಕ್ರಮವನ್ನು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಉದ್ಘಾಟಿಸಿದರು. ಮಿಲಾಪ್ ಶಾದಿಮಹಲ್ ಅಧ್ಯಕ್ಷ ಕೆ.ಜಿಲಾನಿಪಾಷಾ, ಕರ್ನಾಟಕ ರಾಜ್ಯ ನಿವೃತ್ತ ಹಾಗೂ ಪಿಂಚಣಿದಾರರ ಸಂಘದ ತಾಲೂಕು ಅಧ್ಯಕ್ಷ ಟಿ.ಅಯ್ಯಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಬಸಲಿಂಗಪ್ಪ ಹುಡೇದ, ಹುಸೇನಬಾಷಾ, ನಾಗರಾಜ ಇದ್ದರು. 
ರಾಯಚೂರು

ಹಿರಿಯರ ವೃತ್ತಿ ನಿಷ್ಠೆ ಮಾರ್ಗದರ್ಶನವಾಗಲಿ

ಸಿಂಧನೂರು: ಮುಂದಿನ ಪೀಳಿಗೆಗೆ ಜವಾಬ್ದಾರಿ ನಿಭಾಯಿಸಲು ಹಿರಿಯರ ಮಾರ್ಗದರ್ಶನ ಅತ್ಯಗತ್ಯ ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು.
ನಗರದ ಮಿಲಾಪ ಶಾದಿಮಹಲ್‌ನಲ್ಲಿ ಕರ್ನಾಟಕ ರಾಜ್ಯ ನಿವೃತ್ತ ಹಾಗೂ ಪಿಂಚಣಿದಾರರ ಸಂಘ ತಾಲೂಕು ಘಟಕ ಬುಧವಾರ ಹಮ್ಮಿಕೊಂಡಿದ್ದ ನಿವೃತ್ತ ಹಾಗೂ ಪಿಂಚಣಿ ನೌಕರರ ದಿನಾಚರಣೆ ಹಾಗೂ 75 ವರ್ಷ ಮೇಲ್ಪಟ್ಟ ನಿವೃತ್ತ ನೌಕರರಿಗೆ ಗೌರವ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಿವೃತ್ತಿ ನಂತರ ಸೇವೆಯ ಅನುಭವ, ವೃತ್ತಿ ನಿಷ್ಠೆ ಬಗ್ಗೆ ಕಿರಿಯರಿಗೆ ತಿಳುವಳಿಕೆ ನೀಡಬೇಕು ಎಂದರು.
ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ನಾಡಗೌಡ ಮಾತನಾಡಿ, ಪ್ರಸ್ತುತ ದಿನದಲ್ಲಿ ಅವಿಭಕ್ತ ಕುಟುಂಬಗಳು ಮಾಯವಾಗುತ್ತಿವೆ. ನಾವು ಮಾಡಿದ ಆಸ್ತಿಯನ್ನು ಮಕ್ಕಳು ಮುಂದೆ ಹೇಗೆ ನಿಭಾಯಿಸುತ್ತಾರೆ ಎನ್ನುವುದು ಚಿಂತೆಯಾಗಿದೆ. ಸರ್ಕಾರಿ ನೌಕರರಿಗೆ ನಿವೃತ್ತಿ ಇದೆ. ಆದರೆ ರಾಜಕಾರಣಿಗಳಿಗೆ ನಿವೃತ್ತಿ ಇಲ್ಲ. ನಿವೃತ್ತಿ ಹೊಂದಿದ ನೌಕರರು ನಮ್ಮೊಂದಿಗೆ ಸಮಾಜ ಸೇವೆಗೆ ಬರುವ ಪ್ರಯುತ್ನ ಮಾಡಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಸಲಿಂಗಪ್ಪ ಹುಡೇದ ಮಾತನಾಡಿದರು. ಹುಸೇನಬಾಷಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಿಲಾಪ್ ಶಾದಿಮಹಲ್ ಅಧ್ಯಕ್ಷ ಕೆ.ಜಿಲಾನಿಪಾಷಾ, ಕರ್ನಾಟಕ ರಾಜ್ಯ ನಿವೃತ್ತ ಹಾಗೂ ಪಿಂಚಣಿದಾರರ ಸಂಘದ ತಾಲೂಕು ಅಧ್ಯಕ್ಷ ಟಿ.ಅಯ್ಯಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪಖಜಾನೆ ಅಧಿಕಾರಿ ನಾಗರಾಜ, ಎಸ್‌ಬಿಐ ಮುಖ್ಯ ಶಾಖೆಯ ಮುಖ್ಯವ್ಯವಸ್ಥಾಪಕ ಅಮೂಲ್ ಲೋಕಡಾ, ಶ್ರೀನಿವಾಸ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಜೆ.ಬಾಬುರಾವ, ಮ್ಯಾನೇಜರ್ ಸೂಗೂರಪ್ಪ, ಪ್ರಧಾನ ಕಾರ್ಯದರ್ಶಿ ವೆಂಕಟ ರೆಡ್ಡಿ ಇದ್ದರು. ಸಿದ್ದೇಶ್ವರಿ, ಬಸವರಾಜ ವಿ., ಬೀರಪ್ಪ ಶಂಭೋಜಿ, ಸುರೇಶ ಕುಲಕರ್ಣಿ ನಿರ್ವಹಿಸಿದರು.