ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್ ತಾಲೂಕು ಸಮಿತಿಯಿಂದ ಪ್ರತಿಭಟನೆ ನಡೆಸಿ ಎಪಿಎಂಸಿ ಕಾರ್ಯದರ್ಶಿ ರವಿಚಂದ್ರ ಅವರಿಗೆ ಮನವಿ ಸಲ್ಲಿಸಲಾಯಿತು. ಸಮಿತಿ ಪ್ರಮುಖರಾದ ಸತ್ಯಪ್ಪ ವಿರುಪಾಪುರ, ನಾಗನಗೌಡ, ಮರಿಸ್ವಾಮಿ ತುರ್ವಿಹಾಳ, ಯಂಕಪ್ಪ ಕೆಂಗಲ್, ಬಸವಂತರಾಯಗೌಡ ಕಲ್ಲೂರು ಇತರರಿದ್ದರು. 
ರಾಯಚೂರು

ಹಮಾಲಿಗಳಿಗೆ ಗುರುತಿನ ಚೀಟಿ ನೀಡಲಿ

ಪ್ರಮುಖ ಮುಖ್ಯಾಂಶಗಳು

  • ತಾಲೂಕು
  • ಸಮಿತಿಯಿಂದ
  • ಪ್ರತಿಭಟನೆ
ಸಿಂಧನೂರು: ಹಮಾಲರ ವಿವಿಧ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ಒತ್ತಾಯಿಸಿ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್ ತಾಲೂಕು ಸಮಿತಿಯಿಂದ ಪ್ರತಿಭಟನೆ ನಡೆಸಿ ಎಪಿಎಂಸಿ ಕಾರ್ಯದರ್ಶಿ ರವಿಚಂದ್ರ ಅವರಿಗೆ ಮನವಿ ಸಲ್ಲಿಸಲಾಯಿತು.
ತಾಲೂಕಿನಲ್ಲಿ ಎಪಿಎಂಸಿ ಗ್ರಾಮಾಂತರ ಪ್ರದೇಶದಲ್ಲಿ ಗೋದಾಮು ಮತ್ತು ಗೊಬ್ಬರದ ಅಂಗಡಿಗಳಲ್ಲಿ ಅಲ್ಲದೇ ಎಪಿಎಂಸಿಗೆ ಕಳುಹಿಸುವ ರೈತರು ಬೆಳೆದ ದಾಸ್ತಾನುಗಳನ್ನು ಲಾರಿ ಮತ್ತು ಇತರೆ ವಾಹನಗಳಲ್ಲಿ ಹಮಾಲರು ಹಮಾಲಿ ಮಾಡಿ ಜೀವನ ನಡೆಸುತ್ತಿದ್ದಾರೆ.
ಈ ಹಿಂದಿನ ಕೆಲ ವರ್ಷಗಳಲ್ಲಿ ಹಮಾಲರಿಗೆ ಗುರುತಿನ ಚೀಟಿ ಮತ್ತು ಇನ್ನಿತರ ಸೌಲಭ್ಯಗಳು ದೊರೆಯುತ್ತಿದ್ದವು. ಕಳೆದ ವರ್ಷದಿಂದ ಕುಂಟು ನೆಪವೊಡ್ಡಿ ಹಮಾಲರ ಗುರುತಿನ ಚೀಟಿ ನವೀಕರಣ ಮಾಡುವುದಾಗಲಿ, ಹೊಸದಾಗಿ ಗುರುತಿನ ಚೀಟಿ ಕೊಟ್ಟಿಲ್ಲ. ಕೂಡಲೇ ಸರ್ಕಾರಿ ಹಾಗೂ ಖಾಸಗಿ ಮಿಲ್ ಗೋದಾಮು, ವೇರ್‌ಹೌಸ್, ಲಾರಿ ಮೂಲಕ ಕೆಲಸ ನಿರ್ವಹಿಸುವ ಹಮಾಲಿ ಕಾರ್ಮಿಕರಿಗೆ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ನೀಡಬೇಕು. ಗ್ರಾಮೀಣ, ನಗರ, ಬಜಾರ ಹಮಾಲಿ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಒದಗಿಸಬೇಕು. ವಸತಿ ಇಲ್ಲದವರಿಗೆ ವಸತಿ ಮತ್ತು ವಸತಿ ಇದ್ದವರಿಗೆ ಮನೆ ಮಂಜೂರು ಮಾಡಬೇಕೆಂದು ಮನವಿ ಸಲ್ಲಿಸಲಾಯಿತು.