ಸಿಂಧನೂರಿನಲ್ಲಿ ಏರ್ಪಡಿಸಿದ್ದ ಕರ್ನಾಟಕ ಜನಶಕ್ತಿ ಸಂಘಟನೆ ಸಮ್ಮೇಳನದಲ್ಲಿ ಕಾರ್ಯಕಾರಿ ಮಂಡಳಿ ಸದಸ್ಯ ಕೆ.ಎಲ್.ಅಶೋಕ, ರಾಜ್ಯ ಸಮಿತಿ ಸದಸ್ಯ ಬಸವರಾಜ ಬಾದರ್ಲಿ, ಪ್ರಗತಿಪರ ಚಿಂತಕ ಎಂ.ಆರ್.ಭೇರಿ, ಬಸವಕೇಂದ್ರದ ಉಪಾಧ್ಯಕ್ಷ ಬಸಲಿಂಗಪ್ಪ ಬಾದರ್ಲಿ ಇತರರಿದ್ದರು.
ದೇಶಕ್ಕೆ ಜನರೇ ಪರ್ಯಾಯ ಶಕ್ತಿಯಾಗಲಿ
ಸಿಂಧನೂರು: ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಗೆ ಕೊನೆಯ ಚುನಾವಣೆಗಳಾಗಬೇಕು. 2028ರ ಹೊತ್ತಿಗೆ ಕರ್ನಾಟಕದಲ್ಲಿ ಜನ ಚಳವಳಿಗಳೇ ದೊಡ್ಡ ಶಕ್ತಿಯಾಗಬೇಕಿದೆ ಎಂದು ಕರ್ನಾಟಕ ಜನಶಕ್ತಿ ಸಂಘಟನೆ (ಕೆಜೆಎಸ್) ಕಾರ್ಯಕಾರಿ ಮಂಡಳಿ ಸದಸ್ಯ ಕೆ.ಎಲ್.ಅಶೋಕ ಹೇಳಿದರು.
ನಗರದ ಟೌನ್‌ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಜನಶಕ್ತಿ ಸಂಘಟನೆ ವಿಭಾಗ ಮಟ್ಟದ ಸಮ್ಮೇಳನದಲ್ಲಿ ಮಾತನಾಡಿದರು. ದೇಶ ಅತ್ಯಂತ ಕಷ್ಟದಲ್ಲಿದ್ದು, ಬಿಜೆಪಿಯವರು ಕಡು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ.
ರಾಜಕಾರಣಿಗಳ ದೇಶಪ್ರೇಮ ಕಪಟತನದಿಂದ ಕೂಡಿದೆ. ಕಾಂಗ್ರೆಸ್ ಸಹ ಜನವಿರೊಧಿ ನೀತಿಗಳನ್ನೇ ಅನುಸರಿಸುತ್ತಿದ್ದು, ಜನರೇ ದೇಶಕ್ಕೆ ಪರ್ಯಾಯ ಶಕ್ತಿಯಾಗಿ ರೂಪುಗೊಂಡು ವರ್ತಮಾನದ ಜತೆಗೆ ಮುಖಾಮುಖಿಯಾಗಬೇಕು. ಕೇಂದ್ರ ಸರ್ಕಾರ ಎಸ್‌ಐಆರ್ ಅಂತ ಜನ ವಿರೋಧಿ, ಸಂವಿಧಾನ ವಿರೋಧಿ ಕಾನೂನುಗಳನ್ನು ತರುತ್ತಿದ್ದು, ಎಲ್ಲರೂ ವಿರೋಧಿಸಬೇಕು ಎಂದರು.
ಪ್ರಗತಿಪರ ಚಿಂತಕ ಎಂ.ಆರ್.ಭೇರಿ ಮಾತನಾಡಿ, ದೇಶದಲ್ಲಿ ಬುದ್ಧನ ಕಾಲದಿಂದಲೂ ವೈದಿಕಶಾಹಿಗಳು ಸಮಾಜವನ್ನು ಒಡೆದಾಳುತ್ತಿದ್ದಾರೆ. ಈಗಲೂ ವಿವಿಧ ರೀತಿಯ ಶೋಷಣೆ ಮುಂದುವರಿಸಿ ಬೃಹತ್ ಶಕ್ತಿಯಾಗಿ ಬೆಳೆದಿದ್ದಾರೆ. ಸಮಾಜ ವಿರೋಧಿ ಶಕ್ತಿಗಳನ್ನು ಸೋಲಿಸಲು ಸಂಘಟನೆಯಿಂದ ಸಾಧ್ಯ ಎಂದು ತಿಳಿಸಿದರು. ಕಾರ್ಯದರ್ಶಿ ಮಂಡಳಿ ಸದಸ್ಯರಾದ ಲಕ್ಷ್ಮಣ ಮಂಡಲಗೇರಾ ಜನಪ್ರಣಾಳಿಕೆಯನ್ನು ಮಂಡಿಸಿದರು.
ಸ್ವಾಗತ ಸಮಿತಿ ಅಧ್ಯಕ್ಷ ಶಂಕರ ವಾಲೀಕರ್,ರಾಜ್ಯ ಸಮಿತಿ ಸದಸ್ಯ ಬಸವರಾಜ ಬಾದರ್ಲಿ, ಬಸವಕೇಂದ್ರದ ಉಪಾಧ್ಯಕ್ಷ ಬಸಲಿಂಗಪ್ಪ ಬಾದರ್ಲಿ, ಹೋರಾಟಗಾರ ಎಚ್.ಎನ್.ಬಡಿಗೇರ್, ಪ್ರಗತಿಪರ ಚಿಂತಕ ನಾರಾಯಣ ಬೆಳಗುರ್ಕಿ, ಮನುಜಮತ ಬಳಗದ ಉಪಾಧ್ಯಕ್ಷ ಎಸ್.ಎ.ಖಾದರ್ ಸುಭಾನಿ, ಕರಿಯಪ್ಪ ಗುಡಿಮನಿ, ಪ್ರಗತಿಪರ ಚಿಂತಕಿ ಸರಸ್ವತಿ ಪಾಟೀಲ್, ಕಾರ್ಮಿಕ ಮುಖಂಡ ಬಾಷುಮಿಯಾ, ಕೆಆರ್‌ಎಸ್‌ನ ಬಿ.ಎನ್.ಯರದಿಹಾಳ್, ಹೋರಾಟಗಾರರಾದ ಜಾನ್ ವೆಸ್ಲಿ, ಖಾಜಾ ಅಸ್ಲಂ ಪಾಷಾ, ರೈತ ಮುಖಂಡ ಅಮೀನ್‌ಪಾಷಾ ದಿದ್ದಿಗಿ, ದಲಿತ ಮುಖಂಡರಾದ ಅಶೋಕ ನಂಜಲದಿನ್ನಿ, ಮಂಜುನಾಥ್ ಗಾಂಧಿನಗರ ಇದ್ದರು.