ಮಾನ್ವಿಯಲ್ಲಿ ಗುರುವಾರ ಬಹುಜನ ಸಮಾಜ ಪಕ್ಷದಿಂದ ಪ್ರೊ.ಬಿ.ಕೃಷ್ಣಪ್ಪ ಪುಣ್ಯಸ್ಮರಣೆ ಆಚರಿಸಲಾಯಿತು. ಪಕ್ಷದ ರಾಜ್ಯ ಕಾರ್ಯದರ್ಶಿ ಶ್ಯಾಮಸುಂದರ ಕುಂಬಾದಾಳ, ಚಂದ್ರಶೇಖರ ಮಾನ್ವಿ, ಶಿವಲಿಂಗಯ್ಯಸ್ವಾಮಿ, ಕಾಸಿಂ, ಚನ್ನಬಸವ ಹಡಪದ ಇತರರಿದ್ದರು. 
ರಾಯಚೂರು

ಸರ್ಕಾರ ಬಿ.ಕೃಷ್ಣಪ್ಪ ಜಯಂತಿ ಆಚರಿಸಲಿ

ಪ್ರಮುಖ ಮುಖ್ಯಾಂಶಗಳು

  • ಜಯಂತಿ ಆಚರಿಸಲಿ

ಸರ್ಕಾರ ಬಿ.ಕೃಷ್ಣಪ್ಪ ಜಯಂತಿ ಆಚರಿಸಲಿ

ಮಾನ್ವಿ: ಪ್ರೊ.ಬಿ.ಕೃಷ್ಣಪ್ಪ ಅವರು ರಾಜ್ಯದಲ್ಲಿ ಚಳವಳಿ ನಡೆಸಿ ದಲಿತರಿಗೆ ನ್ಯಾಯಕೊಡಿಸುತ್ತಿದ್ದರು ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಕಾರ್ಯದರ್ಶಿ ಶ್ಯಾಮಸುಂದರ ಕುಂಬಾದಾಳ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಹುಜನ ಸಮಾಜ ಪಕ್ಷದಿಂದ ಗುರುವಾರ ಹಮ್ಮಿಕೊಂಡಿದ್ದ ಪ್ರೊ.ಬಿ.ಕೃಷ್ಣಪ್ಪ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದಲಿತ ನಾಯಕರು ರಾಜ್ಯದಲ್ಲಿ ಚಳವಳಿ ಮುನ್ನಡೆಸುತ್ತಿದ್ದಾರೆ. ಸರ್ಕಾರದ ಕೇಂದ್ರ ಬಿಂದು ಆಗಿರುವ ವಿಧಾನಸೌಧದಲ್ಲಿ ದಲಿತರ ರಾಜಕೀಯ ಭವಿಷ್ಯಕ್ಕೆ ಆದ್ಯತೆ ನೀಡಬೇಕು ಎಂದರು.
ಕಾನ್ಸಿರಾಮ ಅವರು 1972ರಲ್ಲಿ ಬಾಮ್ ಸೇಪ್ ಸಂಘಟನೆ ಆರಂಭಿಸಿದರು. ಇದರಿಂದ ಪ್ರೇರಿತಗೊಂಡ ಪ್ರೊ.ಬಿ.ಕೃಷ್ಣಪ್ಪನವರು ಬಾಮ್ ಸೇಪ್ ಸಂಘಟನೆ ಸ್ಥಾಪಿಸಿ ಬಹುಜನ ಸಮಾಜ ಪಕ್ಷಕ್ಕೆ ಬೆಂಬಲ ನೀಡಿ ದಲಿತರನ್ನು ರಾಜಕೀಯ ಪ್ರವೇಶಿಸುವಂತೆ ಮಾಡಿದರು. ಜೂ.9ರಂದು ಸರ್ಕಾರದ ವತಿಯಿಂದ ಜಯಂತಿ ಆಚರಿಸಬೇಕು ಎಂದು ಒತ್ತಾಯಿಸಿದರು.
ಕ್ಷೇತ್ರದ ಉಸ್ತುವಾರಿ ಚಂದ್ರಶೇಖರ ಮಾನ್ವಿ, ಪ್ರಮುಖರಾದ ಶಿವಲಿಂಗಯ್ಯಸ್ವಾಮಿ, ಚಂದ್ರಶೇಖರಯ್ಯ ಸ್ವಾಮಿ, ರವೀಂದ್ರ ಜಾನೆಕಲ್, ಮಲ್ಲಿಕಾರ್ಜುನ ಜಾನೆಕಲ್, ಶರಣಯ್ಯಸ್ವಾಮಿ, ಕಾಸಿಂ, ಬಾಬಾ, ಚನ್ನಬಸವ ಹಡಪದ, ಮಹಮ್ಮದ್ ಇತರರಿದ್ದರು.