ಸಿಂಧನೂರಿನ ಏಳುಮೈಲ್ ಕ್ಯಾಂಪ್‌ನಲ್ಲಿ ಕರ್ನಾಟಕ ಹಮಾಲರ ಸಂಘದಿಂದ ಜಾಗೃತಿ ಆಂದೋಲನ ನಡೆಯಿತು. ಕೆಆರ್‌ಎಸ್ ಜಿಲ್ಲಾ ಕಾರ್ಯದರ್ಶಿ ಚಿಟ್ಟಿಬಾಬು, ಕಾಮ್ರೇಡ್ ರಮೇಶ ಪಾಟೀಲ್, ಸಿಪಿಐಎಂಎಲ್ ಮಾಸ್ ಲೈನ್ ತಾಲೂಕು ಕಾರ್ಯದರ್ಶಿ ಯಲ್ಲಪ್ಪ ಚಿಕ್ಕಬೇರ‌್ಗಿ ಇದ್ದರು.
ನಾಲ್ಕು ಸಂಹಿತಿಗಳ ಹಿಂಪಡೆಯಲಿ
ಸಿಂಧನೂರು: ಅಖಿಲ ಭಾರತ ಮುಷ್ಕರದ ಭಾಗವಾಗಿ ಟಿಯುಸಿಐ ನೇತೃತ್ವದಲ್ಲಿ ಮಂಗಳವಾರ ಕರ್ನಾಟಕ ಹಮಾಲರ ಸಂಘ ಏಳು ಮೈಲ್ ಕ್ಯಾಂಪ್ ಹಾಗೂ ಶ್ರೀಶೈಲ ಮಲ್ಲಿಕಾರ್ಜುನ ಹಮಾಲರ ಸಂಘದಿಂದ ಕಲ್ಮಂಗಿಯಲ್ಲಿ ಜಾಗೃತಿ ಆಂದೋಲನ ನಡೆಸಲಾಯಿತು.
ಟಿಯುಸಿಐ ಸಂಚಾಲಕ ಬಿ.ಎನ್.ಯರದಿಹಾಳ ಮಾತನಾಡಿ, ದೇಶ ಅತ್ಯಂತ ಅಪಾಯಕಾರಿ ಪರಿಸ್ಥಿತಿಯಲ್ಲಿದೆ. ಕೇಂದ್ರ ಸರ್ಕಾರ ಕಾರ್ಪೊರೇಟ್‌ಗಳ ಪರವಾಗಿ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ರೈತರು ಹಾಗೂ ಕೂಲಿ ಕಾರ್ಮಿಕರ ಮೇಲೆ ದಾಳಿ ಮಾಡುತ್ತಿದೆ.
ಕಾರ್ಮಿಕ ಹಾಗೂ ರೈತ ವಿರೋಧಿ ಕಾನೂನುಗಳನ್ನು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಜಾರಿಗೊಳಿಸುವ ಮೂಲಕ ದೇಶದ ಜನರನ್ನು ಗುಲಾಮಗಿರಿಗೆ ತಳ್ಳುವ 4 ಸಂಹಿತಿಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಪ್ರಮುಖರಾದ ಮೇಘರಾಜ್ ನಾಯಕ, ಶರಣೇಗೌಡ ಕಲ್ಮಂಗಿ, ಬಸವರಾಜ ಕಲ್ಮಂಗಿ, ಬಸಪ್ಪ ಕಡಬೂರ, ನಿರುಪಾದಿ ಇತರರಿದ್ದರು.