ಸಿರವಾರದಲ್ಲಿ ಕಗ್ಗೊಲೆ ದೌರ್ಜನ್ಯ ವಿರೋಧಿ ಹೋರಾಟ ಸಮಿತಿಯಿಂದ ಅನಿರ್ದಿಷ್ಟಾವಧಿ ಧರಣಿ ನಡೆಸಲಾಯಿತು. ಹೋರಾಟ ಸಮಿತಿ ಮುಖಂಡರಾದ ಕೆ. ನಾಗಲಿಂಗಸ್ವಾಮಿ, ಪ್ರಭುರಾಜ ಕೊಡ್ಲಿ, ತಿಪ್ಪಣ್ಣ ಬಾಗಲವಾಡ, ಲಂಕೇಶ ಮರಾಠ, ಮನೋಹರ, ರವಿ ಕುಮಾರ ಮಾಡಗಿರಿ,  
ರಾಯಚೂರು

ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಒದಗಿಸಲಿ

ಪ್ರಮುಖ ಮುಖ್ಯಾಂಶಗಳು

  • ದೌರ್ಜನ್ಯ
  • ವಿರೋಧಿ
  • ಹೋರಾಟ

ಸಿರವಾರ: ರಾಯಚೂರು ಜಿಲ್ಲೆಯಲ್ಲಿ ನಡೆದ ದಲಿತರ ಕೊಲೆಗಳನ್ನು ಖಂಡಿಸಿ ಕಗ್ಗೊಲೆ ದೌರ್ಜನ್ಯ ವಿರೋಧಿ ಹೋರಾಟ ಸಮಿತಿಯಿಂದ ಶನಿವಾರ ಅನಿರ್ದಿಷ್ಟಾವಧಿ ಧರಣಿ ನಡೆಸಲಾಯಿತು.

ದಲಿತರ ಮೇಲಿನ ಅತ್ಯಾಚಾರ, ದೌರ್ಜನ್ಯ ಹಾಗೂ ಕಗ್ಗೊಲೆ ಪ್ರಕರಣಗಳ ಕುರಿತು ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ಹಾಗೂ ಸಂತ್ರಸ್ತ ಕುಮಾರಿ ಅಶ್ವಿನಿ ಹೊಕ್ರಾಣಿ, ಭೂಮಾನಂದ ಹದ್ದಿನಾಳ ಹಾಗೂ ರಾಣೆಮ್ಮ ಕರಡಕಲ್ ಪ್ರಕರಣಗಳಿಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಸಂತ್ರಸ್ತ ಕುಟುಂಬಗಳಿಗೆ ನ್ಯಾಯ, ಸೂಕ್ತ ಪರಿಹಾರ ಮತ್ತು ರಕ್ಷಣೆ ಒದಗಿಸಬೇಕು.
ಸಿಎಂ, ಗೃಹ ಸಚಿವರು, ಸಮಾಜ ಕಲ್ಯಾಣ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರು ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿ ಅವರ ಅಹವಾಲು ಆಲಿಸಬೇಕು. ಸರ್ಕಾರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ನ್ಯಾಯ ಒದಗಿಸುವ ಕ್ರಮ ಕೈಗೊಳ್ಳಬೇಕು ಎಂದರು.
ಪ್ರಮುಖರಾದ ಅಬ್ರಹಾಂ ಜಾಗೀರ ಪನ್ನೂರು, ಹನುಮಂತ ಸೀಕಲ್, ಮಾರೇಶ ಭಂಡಾರಿ, ಹನುಮಂತ ಸೀಕಲ್, ನರಸಪ್ಪ ಜೂಕೂರು, ಯಲ್ಲಪ್ಪ ಊಟಕನೂರು ಇತರರಿದ್ದರು.
========
ಫೋಟೋ 29 ಸಿರವಾರ 1