ಮುರಳೀಧರ ಕುಲಕರ್ಣಿ 
ರಾಯಚೂರು

ಮೇ 29 ರಂದು ಉಪನ್ಯಾಸ, ಸಂಗೀತ ಕಾರ್ಯಕ್ರಮ

ರಾಚಯ್ಯ ಸ್ವಾಮಿ
ರಾಯಚೂರು ಶೃತಿ ಸಾಹಿತ್ಯ ಮೇಳದಿಂದ ಮೇ 29 ರಂದು ಬೆಳಗ್ಗೆ 10 ಗಂಟೆಗೆ ನಗರದ ಎಸ್‌ಆರ್‌ಕೆ ಬಿಇಡಿ ಕಾಲೇಜಿನಲ್ಲಿ ಉಪನ್ಯಾಸ, ಸಂಗೀತ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆಂದು ಮೇಳದ ಅಧ್ಯಕ್ಷ ಮರುಳಿಧರ ಕುಲಕರ್ಣಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮವನ್ನು ಖಾತ್ಯ ವಿದ್ವಾಂಸ ವಿಜಯ ಸಿಂಹಾಚಾರ್ಯ ತೋಟಂತಿಲ್ಲಾಯ ಸಂಸ್ಕೃತಿ ಮತ್ತು ಸಂಸ್ಕಾರ ವಿಷಯವಾಗಿ ಉಪನ್ಯಾಸ ನೀಡಲಿದ್ದಾರೆ.
ಅಂತರಾಷ್ಟ್ರೀಯ ಖ್ಯಾತಿ ಪಂಡಿತ ನರಸಿಂಹಲು ವಡವಾಟಿ ಉದ್ಘಾಟಿಸಲಿದ್ದಾರೆ.ಟ್ಯಾಗೂರು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ಆಮರೇಶ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಟ್ಯಾಗೋರ ಸಂಸ್ಥೆಯ ಕಾರ್ಯದರ್ಶಿ ದರೂರು ಬಸವರಾಜ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಬಿ. ವಿಜಯ ರಾಜೇಂದ್ರ, ತಾಲೂಕ ಜನಪದ ಪರಿಷತ್ ವಿಭಾಗೀಯ ಅಧ್ಯಕ್ಷ ಡಾ.ಶರಣಪ್ಪ ಗೋನಾಳ, ಕಾಲೇಜಿನ ಪ್ರಾಚಾರ್ಯ ಡಾ.ವಿರೂಪಾಕ್ಷಿ ಆಗಮಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ರಮೇಶ ಕುಲಕರ್ಣಿ ಇದ್ದರು.