ಸಿಂಧನೂರು ತಾಲೂಕಿನ ಹಾರಾಪುರ ಸರ್ಕಾರಿ ಪ್ರೌಢ ಶಾಲೆೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪರೀಕ್ಷಾ ಭಯ ನಿವಾರಣಾ ತರಬೇತಿ ಕಾರ್ಯಾಗಾರದಲ್ಲಿ ಮುಖ್ಯಶಿಕ್ಷಕ ಅರವಿಂದ ಮಾತನಾಡಿದರು. ಎಸ್ಡಿಎಂಸಿ ಉಪಾಧ್ಯಕ್ಷ ಮೆಹಬೂಬ್ ಪಟೇಲ್, ಸದಸ್ಯ ಸಿದ್ದಪ್ಪ ಛಲವಾದಿ, ಶಿಕ್ಷಕರಾದ ಪ್ರಕಾಶ ಬಿರಾದರ್, ಪಂಪಾಪತಿ, ಅಜ್ಜಪ್ಪ, ರೂಪಾ ಬೇಂದ್ರೆ ಇದ್ದರು.
ಮೊಬೈಲ್ ಬಿಟ್ಟು ಓದಿನತ್ತ ಗಮನಹರಿಸಿ
ಸಿಂಧನೂರು: ವಿದ್ಯಾರ್ಥಿಗಳಲ್ಲಿ ಶಿಸ್ತು, ಶಾಂತಿ, ತಾಳ್ಮೆ ಅತ್ಯವಶ್ಯಕ ಎಂದು ಸಂಪನ್ಮೂಲ ವ್ಯಕ್ತಿ ಯಲ್ಲಾಲಿಂಗ ಅರಳಹಳ್ಳಿ ಹೇಳಿದರು.
ತಾಲೂಕಿನ ಹಾರಾಪುರ ಸರ್ಕಾರಿ ಪ್ರೌಢಶಾಲೆೆಯಲ್ಲಿ ಕರ್ನಾಟಕ ವಿದ್ಯಾರ್ಥಿ ವೇದಿಕೆಯಿಂದ ಶನಿವಾರ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ನಿವಾರಣಾ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಆತ್ಮಹತ್ಯೆ ತಡೆಗಟ್ಟಿ, ಮೊಬೈಲ್ ಬಳಕೆ ನಿಷೇಧಿಸಿ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು ಎಂದರು. ಮುಖ್ಯಶಿಕ್ಷಕ ಅರವಿಂದ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಇಂಥ ಕಾರ್ಯಕ್ರಮಗಳು ಆತ್ಮಸ್ಥೈರ್ಯ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಲಿದೆ. ಈ ವರ್ಷ ಶೇ.100 ಫಲಿತಾಂಶ ಪಡೆಯುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಎಸ್ಡಿಎಂಸಿ ಉಪಾಧ್ಯಕ್ಷ ಮೆಹಬೂಬ್ ಪಟೇಲ್, ಸದಸ್ಯ ಸಿದ್ದಪ್ಪ ಛಲವಾದಿ, ಶಿಕ್ಷಕರಾದ ಪ್ರಕಾಶ ಬಿರಾದರ್, ಪಂಪಾಪತಿ, ಅಜ್ಜಪ್ಪ, ರೂಪಾ ಬೇಂದ್ರೆ, ಜಯಶ್ರೀ, ಮುಬಾರಕ್ ಇತರರಿದ್ದರು.