ಸಿಂಧನೂರು ಉಪ್ಪಾರವಾಡಿ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಬೇಸಿಗೆ ಶಿಬಿರ ನಡೆಯಿತು. ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಸ್ಕೌಟ್ಸ್ ಮಾಸ್ಟರ್ ಬೀರಪ್ಪ ಶಂಭೋಜಿ, ದುಗ್ಗಮನಗುಂಡ ಸರ್ಕಾರಿ ಶಾಲೆ ಮುಖ್ಯಶಿಕ್ಷಕ ಶಂಕರ ದೇವರು ಹಿರೇಮಠ, ಗೈಡ್ಸ್ ಕ್ಯಾಪ್ಟನ್ ಬಸಮ್ಮ ಹಿರೇಮಠ ಇದ್ದರು. 
ರಾಯಚೂರು

ಸ್ಕೌಟ್ಸ್-ಗೈಡ್ಸ್‌ನಿಂದ ನಾಯಕತ್ವ ಗುಣ

ರುದ್ರಪ್ಪ ವಾಲಿ

ಪ್ರಮುಖ ಮುಖ್ಯಾಂಶಗಳು

  • ಶಿಸ್ತು
  • ಸಮಯಪಾಲನೆ
  • ಏಕಾಗ್ರತೆ
ಸಿಂಧನೂರು: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿಬಿರದಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವುದರಿಂದ ನಾಯಕತ್ವ ಗುಣ ಹೆಚ್ಚಲಿದೆ ಎಂದು ಸ್ಕೌಟ್ಸ್-ಗೈಡ್ಸ್ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಬೀರಪ್ಪ ಶಂಭೋಜಿ ಹೇಳಿದರು.
ನಗರದ ಉಪ್ಪಾರವಾಡಿ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಭಾರತ್ ಸ್ಕೌಟ್ಸ್-ಗೈಡ್ಸ್ ಸಂಸ್ಥೆ ಸಿಂಧನೂರು, ಅಕ್ಕಮಹಾದೇವಿ ಗೈಡ್ ಘಟಕ ಮುಕ್ತದಳ, ಅಂಬಾದೇವಿ ಗೈಡ್ ಘಟಕ, ರಾಮಕೃಷ್ಣ ಕ್ಲಬ್ ಮುಕ್ತದಳ ಸಂಯುಕ್ತಾಶ್ರಯದಲ್ಲಿ ಬೇಸಿಗೆ ಶಿಬಿರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ಕೌಟ್ಸ್-ಗೈಡ್ಸ್‌ನಲ್ಲಿ ಮಕ್ಕಳು ಸೇರಿಕೊಳ್ಳಬೇಕು ಎಂದು ತಿಳಿಸಿದರು.
ಮುಖ್ಯಶಿಕ್ಷಕ ಶಂಕರ ದೇವರು ಹಿರೇಮಠ ಮಾತನಾಡಿ, ಸ್ಕೌಟ್ಸ್-ಗೈಡ್ಸ್ ಶಿಬಿರದಿಂದ ಶಿಸ್ತು, ಸಮಯಪಾಲನೆ, ಏಕಾಗ್ರತೆ, ಪರಿಸರ ರಕ್ಷಣೆ ಮಾಡುವ ಉತ್ತಮ ಗುಣಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಗೈಡ್ಸ್ ಕ್ಯಾಪ್ಟನ್ ಬಸಮ್ಮ ಹಿರೇಮಠ ಮಾತನಾಡಿ, ವಿದ್ಯಾರ್ಥಿಗಳು ಬೇಸಿಗೆ ಶಿಬಿರದಲ್ಲಿ ನೀಡಿದ ಉತ್ತಮ ವಿಚಾರಗಳನ್ನು ಅಳವಡಸಿಕೊಳ್ಳಬೇಕು ಎಂದರು. ಸ್ಕೌಟ್ಸ್ ಮಾಸ್ಟರ್ ಬಸವರಾಜ ಹುಲಿಹೈದರ್ ಇದ್ದರು.