ನೀರಮಾನ್ವಿಯ ರಾಮನಾಥ ಕ್ಯಾಂಪ್ ಸೀತಾರಾಮಸ್ವಾಮಿ ದೇವಸ್ಥಾನದಲ್ಲಿ ಸಾಮೂಹಿಕ ಲಕ್ಷ್ಮೀ ಸುದರ್ಶನ ಹೋಮ ಜರುಗಿತು.
ಮಾನ್ವಿ: ತಾಲೂಕಿನ ನೀರಮಾನ್ವಿ ರಾಮನಾಥ ಕ್ಯಾಂಪ್‌ನಲ್ಲಿರುವ ಸೀತಾರಾಮಸ್ವಾಮಿ ದೇವಸ್ಥಾನದಲ್ಲಿ ಗುರುವಾರ ಧನುರ್ಮಾಸ ಅಂಗವಾಗಿ ಲೋಕಕಲ್ಯಾಣಾರ್ಥ ಸಾಮೂಹಿಕ ಲಕ್ಷ್ಮೀ ಸುದರ್ಶನ ಮಹಾಹೋಮ ನಡೆಸಲಾಯಿತು.
ಸೀತಾರಾಮಸ್ವಾಮಿ ಮೂರ್ತಿಗಳಿಗೆ ವಿಶೇಷ ಅಲಂಕಾರ ಹಾಗೂ ಪೂಜೆ ನಡೆಸಲಾಯಿತು.
ವೇದ ಪಂಡಿತರಾದ ಜಿ.ಸತ್ಯನಾರಾಯಣ ಶರ್ಮಾ, ಭಾಗವತುಲ ದುರ್ಗಪ್ರಸಾದ ಶರ್ಮಾ, ಫಣೇಂದ್ರಶರ್ಮಾ, ಕೃಷ್ಣಮಾಚಾರ್ಯಲು ಶರ್ಮಾ, ಮಣಿಕಂಠ ಶರ್ಮಾ, ಜಿ.ರವಿಕಿರಣ್ ಶರ್ಮಾ, ಸಾತ್ವಿಕ್ ಶರ್ಮಾ, ಮಹೇಶ ಶರ್ಮಾ, ಸಾಯಿರಾಮಚಾರ್ಯ ನೇತೃತ್ವದಲ್ಲಿ ಹೋಮ ಜರುಗಿತು.