ಅಧಿಕ ಮಾಸದ ನಿಮಿತ್ತ ರಾಯಚೂರಿನ ಕೋಟೆಯ ಶ್ರೀ ಮುಂಗ್ಲಿ ಪ್ರಾಣ ದೇವರವ ದೇವಸ್ಥಾನದಲ್ಲಿ ಮಹಿಳಾ ಭಜನಾ ಮಂಡಳಿಯ ವತಿಯಿಂದ ಮಂಗಳವಾರ ಶ್ರೀ ಲಕ್ಷ್ಮೀ ನಾರಾಯಣ ಕುಂಕುಮಾರ್ಚನೆಯನ್ನು ಭಕ್ತಿಪೂರ್ವಕವಾಗಿ ನಡೆಸಲಾಯಿತು. 
ರಾಯಚೂರು

ಪ್ರಾಣ ದೇವರ ಸನ್ನಿದಿಯಲ್ಲಿ ಕುಂಕುಮಾರ್ಚನೆ

ರಾಯಚೂರು ಅಧಿಕ ಮಾಸದ ನಿಮಿತ್ತ ನಗರದ ಕೋಟೆಯ ಶ್ರೀ ಮುಂಗ್ಲಿ ಪ್ರಾಣ ದೇವರವ ದೇವಸ್ಥಾನದಲ್ಲಿ ಮಹಿಳಾ ಭಜನಾ ಮಂಡಳಿಯ ವತಿಯಿಂದ ಮಂಗಳವಾರ ಶ್ರೀ ಲಕ್ಷ್ಮೀ ನಾರಾಯಣ ಕುಂಕುಮಾರ್ಚನೆಯನ್ನು ಭಕ್ತಿಪೂರ್ವಕವಾಗಿ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಅರ್ಚಕ ಆನಂದ ಆಚಾರ್ಯ ಮಾತನಾಡಿ, ಅಧಿಕ ಮಾಸವು ಧಾರ್ಮಿಕವಾಗಿ ಮಹತ್ವದ ಕಾಲವಾಗಿದ್ದು, ಈ ಸಮಯದಲ್ಲಿ ಮಾಡುವ ದೇವತಾ ಕಾರ್ಯಗಳು ಅಪಾರವಾದ ಪುಣ್ಯ ಫಲವನ್ನು ನೀಡುತ್ತವೆ ಎಂಬ ನಂಬಿಕೆ ಇದೆ. ಈ ಉದ್ದೇಶದಿಂದ, ಮುಂಗ್ಲಿ ಪ್ರಾಣದೇವರ ಸನ್ನಿಧಾನದಲ್ಲಿ ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅನೇಕ ಮಹಿಳೆಯರು ಕುಂಕುಮದಲ್ಲಿ ದೇವತೆಯನ್ನು ಆವಾಹನೆ ಮಾಡಿ, 333 ನಾಮಾವಳಿಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ಕುಂಕುಮಾರ್ಚನೆಯನ್ನು ನಡೆಸಿ ಶ್ರೀ ಲಕ್ಷ್ಮೀ ನಾರಾಯಣನ ಅನುಗ್ರಹಕ್ಕಾಗಿ, ದೀರ್ಘಕಾಲದ ಸುಮಂಗಲಿ ಭಾಗ್ಯಕ್ಕಾಗಿ ಹಾಗೂ ಸತ್ಸಂತಾನ ಪ್ರಾಪ್ತಿಗಾಗಿ ಪ್ರಾರ್ಥನೆ ಸಲ್ಲಿಸಿದರು.