ಮಸ್ಕಿಯಲ್ಲಿ ಅಯ್ಯಪ್ಪಸ್ವಾಮಿ ಮೂರ್ತಿ ಮೆರವಣಿಗೆಯಲ್ಲಿ ಮಹಿಳೆಯರು ಕುಂಬಹೊತ್ತು ಸಾಗಿದರು.
- ಅಯ್ಯಪ್ಪಸ್ವಾಮಿ
- ವಾರ್ಷಿಕೋತ್ಸವ
- ದೇವಸ್ಥಾನದ
ಮಸ್ಕಿ: ಪಟ್ಟಣದ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದ ವಾರ್ಷಿಕೋತ್ಸವ ಹಾಗೂ ಮಂಡಲಪೂಜೆ ಅಂಗವಾಗಿ ಹೋಮ-ಹವನ, ಮೂರ್ತಿಪೂಜೆ ಹಾಗೂ ಮಹಿಳೆಯರಿಂದ ಕುಂಭ ಮೆರವಣಿಗೆ ಶುಕ್ರವಾರ ನಡೆಯಿತು.
ಪಟ್ಟಣದ ಅಗಸಿ ಹತ್ತಿರದ ಆಂಜನೇಯ ದೇವಸ್ಥಾನದಿಂದ ಆರಂಭವಾದ ಪೂರ್ಣಕುಂಭದ ಮೆರವಣಿಗೆ ಅಲಂಕೃತ ವಾಹನದಲ್ಲಿ ಅಯ್ಯಪ್ಪಸ್ವಾಮಿ ಮೂರ್ತಿ ಮೆರವಣಿಗೆ ಕಟ್ಟೆ ದುರ್ಗಮ್ಮದೇವಿ, ಖಲೀಲ್ ವೃತ್ತ, ಮೇನ್ ಬಜಾರ್, ದೈವದಕಟ್ಟೆ, ತೇರು ಬಜಾರ್, ಕನಕ ವೃತ್ತದ ಮೂಲಕ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ತಲುಪಿತು. ಮೆರವಣಿಗೆ ವೇಳೆ ಮಾಲಾಧಾರಿಗಳು ಅಯ್ಯಪ್ಪಸ್ವಾಮಿ ನಾಮಸ್ಮರಣೆ ಮೂಲಕ ಭಜನೆ ಮಾಡಿದರು.
ಅಯ್ಯಪ್ಪ ಸ್ವಾಮಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಬಸನಗೌಡ ಪೊಲೀಸ್ ಪಾಟೀಲ್, ಗುರುಸ್ವಾಮಿ ರಾಘವೇಂದ್ರ ಚಿನ್ನಿ, ಪ್ರಮುಖರಾದ ಶೇಖರಪ್ಪಗೌಡ ಪೊಲೀಸ್ ಪಾಟೀಲ್, ಮಲ್ಲಯ್ಯ ಬಳಿಗಾರ, ಮಾಲಾಧಾರಿಗಳಾದ ಸಿದ್ದರಾಮಯ್ಯ ಗಡ್ಡಿಮಠ, ವೀರೇಶ ಬಳಿಗಾರ, ಪ್ರಶಾಂತ ಸಜ್ಜನ್, ಶಿವಪ್ಪ ಕಾಯಿಪಲ್ಲೆ, ಬಸವರಾಜ ಕಡಬೂರು, ನಾಗರಾಜ(ಉಡುಪಿ), ಪರಶುರಾಮ ಕೊಡ್ಲಿ, ಲಿಂಗಪ್ಪ, ಮಣಿಕಂಠ ಚಿನ್ನಿ, ಕಿರಣಕುಮಾರ ಇತರರಿದ್ದರು.