ಕನ್ನಾಪೂರಹಟ್ಟಿಯಲ್ಲಿ ಕೂಡಲ ಸಂಗಮನಾಥ ದೇಗುಲದ ಜಾತ್ರೋತ್ಸವ ಅಂಗವಾಗಿ ಕಳಸ ಮೆರವಣಿಗೆಗೆ ಚಾಲನೆ ನೀಡಲಾಯಿತು. ಎಂಎಲ್ಸಿ ಶರಣಗೌಡ ಪಾಟೀಲ್ ಬಯ್ಯಪೂರ, ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪುರ, ಪುರಸಭೆ ಮುಖ್ಯಾಧಿಕಾರಿ ಪ್ರವೀಣ ಭೋಗಾರ, ಪ್ರಮುಖರಾದ ಶರಣಬಸವ ವ್ಯಾಕರನಾಳ, ಅಶೋಕಗೌಡ ಪಾಟೀಲ್, ಮಹಾಂತೇಶ ಪಾಟೀಲ್, ಅನಿಲ ಕುಮಾರ್ ಬುಶೆಟ್ಟಿ ಇತರರಿದ್ದರು. 
ರಾಯಚೂರು

ಕೂಡಲಸಂಗಮನಾಥ ಜಾತ್ರೆ ಸಂಪನ್ನ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಕಳಸ ಮೆರವಣಿಗೆಗೆ ಚಾಲನೆ
  • ಮುದಗಲ್ ಕನ್ನಾಪೂರಹಟ್ಟಿ ಕೂಡಲಸಂಗಮನಾಥ ಜಾತ್ರಾ
ಮುದಗಲ್: ಕನ್ನಾಪೂರಹಟ್ಟಿಯಲ್ಲಿ ಕೂಡಲಸಂಗಮನಾಥ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು. ಶ್ರಾವಣ ಮಾಸದ ಪ್ರಥಮ ಬೆಳಗಿನ ಜಾವ ಕನ್ನಾಪೂರಹಟ್ಟಿ ಗ್ರಾಮದಿಂದ ಗ್ರಾಮಸ್ಥರು ಕಲಶಗಳನ್ನು ಹೊತ್ತು ಮೆರವಣಿಗೆ ಮೂಲಕ ದೇಗುಲಕ್ಕೆ ತೆರಳಿದರು.
ದೇಗುಲದಲ್ಲಿನ ಈಶ್ವರ ಮೂರ್ತಿಗೆ ರುದ್ರಾಭಿಷೇಕ, ಎಲೆಚಟ್ಟು ಸೇವೆ, ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಯಿತು.
ಎಂಎಲ್ಸಿ ಶರಣಗೌಡ ಪಾಟೀಲ್ ಬಯ್ಯಪೂರ, ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪುರ, ಪ್ರಮುಖರಾದ ದೊಡ್ಡಬಸವರಾಜ ಪಾಟೀಲ್, ಡಾ.ನಾಗನಗೌಡ ಪಾಟೀಲ್, ಶರಣಬಸವ ಪಾಟೀಲ್ ವ್ಯಾಕರನಾಳ, ಅಶೋಕಗೌಡ ಪಾಟೀಲ್, ಅನಿಲಕುಮಾರ್ ಬುಶೆಟ್ಟಿ, ಮಹಾಂತೇಶ ಪಾಟೀಲ್, ಸುರೇಶ ಸೇಠ್, ರಾಜು ಮಾಲಿಪಾಟೀಲ್, ಪರಮೇಶ, ಪರಮಯ್ಯ ತಾತ, ಮಲ್ಲಿಕಾರ್ಜುನ, ಚನ್ನಬಸವ ಪಾಲ್ಗೊಂಡಿದ್ದರು.